There is vitality in the very name of Kempe Gowda.
Published on:
Copied
Follow Us
ಮುಳಬಾಗಿಲು: ಕೆಂಪೇಗೌಡರ ದೂರದೃಷ್ಟಿ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು. ಇವರು ಬೆಂಗಳೂರು ನಿಮಾತೃ ಮಾತ್ರ ಅಲ್ಲದೆ ನಾನಾ ಬಗೆಯ ಜನಪರ ಕೆಲಸ ಮಾಡಿ ಜನಮಾನಸದಲ್ಲಿ ಉಳಿದಿರುವ ಮಹಾನ್ ನಾಯಕರಾಗಿದ್ದಾರೆ ಎಂದು ಬೆಸ್ಕಾಂ ಇಲಾಖೆ ನಿವೃತ್ತ ಎಇಇ ವಿ.ಎಂ.ರಮೇಶ್ ತಿಳಿಸಿದರು.
ನಗರದ ಬೆಸ್ಕಾಂ ಇಲಾಖೆ ಕಚೇರಿಯಲ್ಲಿ ಕೆಪಿಟಿಸಿಎಲ್ ಬೆಸ್ಕಾಂ, ಗುತ್ತಿಗೆದಾರರಿಂದ ಗುರುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಮಾತನಾಡಿ, ಕೆಂಪೇಗೌಡರ ಹೆಸರಿನಲ್ಲಿಯೇ ಒಂದು ಚೈತನ್ಯ ಇದೆ. ಅಲ್ಲದೆ ಅವರಲ್ಲಿ ಜನರ ಮನಸ್ಸನ್ನು ಆಕರ್ಷಿಸುವ ಶಕ್ತಿ ಇದ್ದು, ನಿರ್ಗತಿಕರನ್ನು ರಕ್ಷಣೆ ಮಾಡುವ ಗುಣ ಹೊಂದಿದ್ದರು ಎಂದರು.
ರಾಜರ ಆಳ್ವಿಕೆಯಲ್ಲಿ ಸಾಮಂತ ನಾಯಕ ಆಗಿದ್ದರೂ ಕೆರೆ&ಕುಂಟೆ ಹಾಗೂ ಪೇಟೆ ನಿಮಾರ್ಣ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು ಎಂದು ಹೇಳಿದರು.
ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಸುನೀಲ್ ಮಾತನಾಡಿ, ಇಲ್ಲಿನ ಬೆಸ್ಕಾಂ ಕಚೇರಿಯಲ್ಲಿ ಎಲ್ಲ ನೌಕರರು ಒಗ್ಗಟ್ಟಾಗಿದ್ದಾರೆ ಎನ್ನುವುದಕ್ಕೆ ಇಲ್ಲಿ ನಡೆಯುವ ಪ್ರತಿ ಸಮುದಾಯದ ಜಯಂತಿಗಳು ನೇರ ಉದಾಹರಣೆಯಾಗಿದೆ ಎಂದು ತಿಳಿಸಿದರು.
500 ವರ್ಷದ ಹಿಂದೆಯೇ ನಾಡಪ್ರಭು ಕೆಂಪೇಗೌಡರು ಬೆಂಗಳೂರು ಸುತ್ತಮುತ್ತಲಿನಲ್ಲಿ 64 ಪೇಟೆಗಳನ್ನು ನಿಮಾರ್ಣ ಮಾಡಿದ್ದಾರೆ. ಅವರ ಎದೆಗಾರಿಕೆ ಇವತ್ತಿನ ತಲೆಮಾರಿಗೆ ಸ್ಫೂರ್ತಿಯಾಗಬೇಕಿದೆ. ಅವರ ಹಾದಿಯಲ್ಲಿ ನಾವು ಮುನ್ನೆಡೆದರೆ ಮುಂದಿನ ಜನಾಂಗದವರಿಗೂ ಸಮಾಜದಲ್ಲಿ ಪರಿಶುದ್ಧ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.