ಜಲಜೀವನ ಮಿಷನ್​ ಇದ್ದೂ ನೀರಿಲ್ಲ

There is no water despite the Jaljeevan Mission.
There is no water despite the Jaljeevan Mission.
Published on
ಕೊರಟಗೆರೆ: ತಾಲೂಕಿನಲ್ಲಿ ವಿವಿಧ ಜ್ವಲಂತ ಸಮಸ್ಯೆಗಳು ತಲೆದೋರಿದ್ದು, ವಿಶೇಷವಾಗಿ ಕೋಳಾಲ ಹೋಬಳಿಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಹೊಸಪಾಳ್ಯ ಮತ್ತು ದುರ್ಗದ ನಾಗೇನಹಳ್ಳಿ ಗ್ರಾಮಸ್ಥರು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಸಚಿವರನ್ನು ತಡೆದ ಗ್ರಾಮಸ್ಥರು, ಜಲಜೀವನ ಮಿಷನ್​ ಯೋಜನೆಯಡಿ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಸಹ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ ಎಂದು ದೂರಿದರು.
ಯೋಜನೆಗಳ ಅನುಷ್ಠಾನದಲ್ಲಿ ವ್ಯತ್ಯಯ ಉಂಟಾಗಿ ಜನರಿಗೆ ನಿರೀಕ್ಷಿತ ಪ್ರಯೋಜನ ಸಿಗುತ್ತಿಲ್ಲ. ಇದಷ್ಟೇ ಅಲ್ಲದೆ, ಕಂದಾಯ ಇಲಾಖೆಯಲ್ಲಿಯೂ ಹಲವು ಸಮಸ್ಯೆಗಳು ಮುಂದುವರಿದಿದ್ದು, ಕಡತಗಳ ವಿಲೇವಾರಿ ವಿಳಂಬವಾಗುತ್ತಿದೆ ಎಂದು ಗ್ರಾಮಸ್ಥರು ಸಚಿವರ ಗಮನಕ್ಕೆ ತಂದರು.
ಸಚಿವ ವಿ.ಸೋಮಣ್ಣ ಅವರು ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ, ಅವರ ಕುಂದು&ಕೊರತೆಗಳನ್ನು ಆಲಿಸಿದರು. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿ, ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ರ್ನಿಲಕ್ಷ$್ಯ ತೋರಬಾರದು ಎಂದು ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net