ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಗುರುವಾರ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ದೇವೇಂದ್ರಪ್ಪ ರಾಮಸಮುದ್ರ, ನಾಗಣ್ಣಗೌಡ ಹಳಿಗೇರಾ, ಹಣಮಂತ, ಪರಶುರಾಮ, ಹಣಮಂತ ಬಳಿಚಕ್ರ, ಹಣಮಂತ ನಾಯಕ, ಭಾಸ್ಕರ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಚನ್ನಾರೆಡ್ಡಿ ಪಾಟೀಲ್ ಹೇಳಿಕೆ
ರಾಮಸಮುದ್ರದಲ್ಲಿ ೨ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ
ಯಾದಗಿರಿ : ಮತಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ತಾಲೂಕಿನ ರಾಮಸಮುದ್ರ ತಾಂಡಾದಲ್ಲಿ ೨೦೨೫-೨೬ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಎಸ್‌ಸಿಸಿ ಯೋಜನೆಯಡಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣ ಮಾಡುತ್ತಿರುವ ೨ ಕೋಟಿ ರೂ.ವೆಚ್ಚದ ಆಶನಾಳ-ರಾಮಸಮುದ್ರದವರೆಗಿನ ರಸ್ತೆ ಕಾಮಗಾರಿಗೆ ಗುರುವಾರ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನನ್ನ ಮತಕ್ಷೇತ್ರದಲ್ಲಿ ಹೆಚ್ಚು ತಾಂಡಾಗಳಿದ್ದು, ಅವುಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡುವ ಮೂಲಕ ಮುಂದಿನ ಎರಡು ವರ್ಷಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗುವುದು. ಅಲ್ಲದೆ ಶುದ್ಧ ಕುಡಿಯುವ ನೀರು, ಆಸ್ಪತ್ರೆ, ರಸ್ತೆ, ವಿದ್ಯುತ್ ಶಿಕ್ಷಣ ಹೀಗೆ ಮಾನವರ ದೈನಂದಿನ ಜೀವನಕ್ಕೆ ಬೇಕಾಗುವ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಅಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅನುದಾನದ ಕೊರತೆ ಇಲ್ಲ. ನಿಮ್ಮ ಊರಿನ ಸಮಸ್ಯೆ ಮತ್ತು ಅಗತ್ಯತೆಗಳು ಏನೇ ಇದ್ದರೂ ನೇರವಾಗಿ ನನ್ನ ಗಮನಕ್ಕೆ ತಂದರೆ ಅನುದಾನ ಒದಗಿಸುವ ಮೂಲಕ ಕೆಲಸ ಮಾಡಿಕೊಡುವೆ ಎಂದು ಶಾಸಕರು ಭರವಸೆ ನೀಡಿದರು.
ಪಂಚ ಗ್ಯಾರಂಟಿಗಳು ಜನರ ಮನೆ ಬಾಗಿಲಿಗೆ ತಲುಪುತ್ತಿವೆ. ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅಭಿವೃದ್ಧಿ ಕೆಲಸಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಅವರನ್ನು ಭೇಟಿ ಮಾಡಿ ಇನ್ನೂ ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ತರಲಾಗುವುದು ಎಂದರು.
ಈ ವೇಳೆ ದೇವೇಂದ್ರಪ್ಪ ರಾಮಸಮುದ್ರ, ನಾಗಣ್ಣಗೌಡ ಹಳಿಗೇರಾ, ಹಣಮಂತ, ಅಽಕಾರಿಗಳಾದ ಪರಶುರಾಮ, ಹಣಮಂತ ಬಳಿಚಕ್ರ, ಹಣಮಂತ ನಾಯಕ, ಭಾಸ್ಕರ್ ಇತರರಿದ್ದರು.