ಅನುದಾನ ಕೊರತೆ ಇದ್ದರೂ ಬಿಡುವ ಪ್ರಶ್ನೆಯೇ ಇಲ್ಲ Bhumi Puja
ಶ್ರೀನಿವಾಸಪುರ Bhumi Puja ತಾಲೂಕು ಹೋಳೂರು, ಸುಗಟೂರು ಸೇರಿದಂತೆ 4 ಗ್ರಾಮಗಳಲ್ಲಿ ಡಾಂಬರ್, ಸಿಸಿ ರಸ್ತೆ ನಿಮಾರ್ಣಕ್ಕೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಭೂಮಿಪೂಜೆ ನೆರವೇರಿಸಿದರು. ಸಂಸದ ಮಲ್ಲೇಶ್ ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಗುತ್ತಿಗೆದಾರ ಆಂಜನೇಯರೆಡ್ಡಿ, ತೊಟ್ಲಿ ಪಿಡಿಒ ಆಶ್ವಿನಿ, ಉರಿಗಿಲಿ ಪಿಡಿಒ ರಮೇಶ್, ಐತರಾಸನಹಳ್ಳಿ ಪಿಡಿಒ ಸತೀಶ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೇಳಿಕೆ
ಶ್ರೀನಿವಾಸಪುರ: ಸರ್ಕಾರದಿಂದ 100 ಕೋಟಿ ರೂ. ಬಿಡುಗಡೆಯಾಗಲಿದೆ, Bhumi Puja ನ್ಯಾಯಾಲಯದಲ್ಲಿ ದಾವೇ ಹೂಡಿದ್ದೇನೆ. ಎಲ್ಲ ಗ್ರಾಮಗಳಿಗೂ ರಸ್ತೆ ಸಂಪರ್ಕ ಜತೆಗೆ ಮೂಲ ಸೌಲಭ್ಯ ಒದಗಿಸುತ್ತೇನೆ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಹೋಳೂರು, ಸುಗಟೂರು ಸೇರಿದಂತೆ 4 ಗ್ರಾಮಗಳಲ್ಲಿ ಡಾಂಬರ್ ಮತ್ತು ಸಿಸಿ ರಸ್ತೆ ನಿಮಾರ್ಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗುತ್ತಿಗೆದಾರರು ಗಣಮಟ್ಟ ಕಾಪಾಡಬೇಕು. ಸುಳ್ಳು ಹೇಳಿ ಜನರನ್ನು ಯಾಮಾರಿಸುವ ವ್ಯಕ್ತಿ ನಾನಲ್ಲ. ಸರ್ಕಾರದಲ್ಲಿ ಅನುದಾನದ ಕೊರತೆ ಇದೆ. ಆದರೂ ಬಿಡುವ ಪ್ರಶ್ನೆಯೇ ಇಲ್ಲ. ಹೋರಾಟ ಮಾಡಿ ಅನುದಾನ ಬಿಡುಗಡೆ ಮಾಡಿಸುತ್ತೇನೆ. ತಾಲೂಕಿನ ಎಲ್ಲ ಗ್ರಾಮಗಳಿಗೂ ರಸ್ತೆ, ಬಸ್ ಸೌಕರ್ಯ, ಕುಡಿಯುವ ನೀರು ಸಮುದಾಯಭವನ, ದೇವಾಲಯ, ಶಾಲೆಗಳ ಅಭಿವೃದ್ಧಿ, ಹೈಮಾಸ್ಟ್ ವಿದ್ಯುತ್ ದೀಪ ಹಾಕಿಸುತ್ತೇನೆ ಎಂದರು.
ಜಲಜೀವನ್ ಕಾಮಗಾರಿ ಕುಂಠಿತವಾಗಿದ್ದು, ರಸ್ತೆಗಳನ್ನು ಅಗೆದು ಹೋದವರು ಇತ್ತ ಮುಖ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದಾಗ, ಸ್ಥಳದಲ್ಲಿ ಇದ್ದ ಇಂಜಿನಿಯರ್ ಸಾಹೇಬ್ ಗೌಡರನ್ನು ತಾಕೀತು ಮಾಡಿ, ಮುಂದಿನವಾರ ಪ್ರಗತಿ ಪರಿಶೀಲನೆ ಸಭೆ ಮಾಡಲಿದ್ದು, ಜೆಜೆಎಂ ಅಪೂರ್ಣ ವೇತನ ಬಾಕಿ ಗುತ್ತಿಗೆದಾರರ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಸಂಸದ ಮಲ್ಲೇಶ್ ಬಾಬು ಮಾತನಾಡಿ, ಕೇಂದ್ರ ಸರ್ಕಾರದಿಂದ ವರ್ಷಕ್ಕೆ 5 ಕೋಟಿ ರೂ. ಬಿಡುಗಡೆಯಾಗುತ್ತಿದೆ. ನನ್ನ ಲೋಕಸಭಾ ಕ್ಷೇತ್ರಕ್ಕೆ ಸರಿ ಸುಮಾರು 3 ಸಾವಿರ ಹಳ್ಳಿಗಳು ಸೇರಲಿವೆ. ನಮ್ಮದೇ ಎನ್ಡಿಎ ಪಕ್ಷ ಇರುವುದರಿಂದ ನಾನು ಹೋರಾಟ ಮಾಡಲು ಸಾಧ್ಯವಿಲ್ಲ. ಬರುವ ಎಲ್ಲ ಅನುದಾನವನ್ನು ವಿಭಾಗ ಮಾಡಿ ಹಳ್ಳಿಗಳಿಗೆ ಹಂಚುತ್ತೇನೆ ಎಂದರು.
ವೇಮಗಲ್ ಬಳಿ ಹೆಲಿಕಾಪ್ಟರ್ ಜೋಡಣಾ ಕಾರ್ಖಾನೆ ಪ್ರಾರಂಭವಾಗಿದೆ, ಡಿಪ್ಲೊಮಾ, ಐಟಿಐ ಮಾಡಿರುವ ನಿರುದ್ಯೋಗ ಯುವಕರಿಗೆ ಶಿಫಾರಸು ಮಾಡಿ ಕೆಲಸ ಕೊಡಿಸುತ್ತೇನೆ. ನನ್ನ ವ್ಯಾಪ್ತಿಗೆ ರಾಷ್ಟ್ರೀಯ ಹೆದ್ದಾರಿ, ಸೇತುವೆಗಳು, ಜೆಜೆಎಂ ಕಾಮಗಾರಿಗಳು ಬರಲಿದೆ. ಇಂತಹ ಬೃಹತ್ ಕೆಲಸ ಮಾಡಿಕೊಡಲು ಸಿದ್ಧನಾಗಿದ್ದೇನೆ ಎಂದರು.
ಬೈಯಪ್ಪನಹಳ್ಳಿ ರಾಘವೇಂದ್ರ, ಮುಖಂಡ ಸುರೇಶ್, ಯಳೇಗೌಡ, ಗೋಪಾಲ್, ಮುದುವಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್, ಬಿಸಣ್ಣ, ರಾಮನ್ನ, ಪಿಡಿಒ ರಮೇಶ್, ಪಿಡಿಒ ಸತೀಶ್, ನಾಯಕರಹಳ್ಳಿ ಗೋಪಾಲಗೌಡ, ಮುನಿರೆಡ್ಡಿ, ವೆಂಕಟೇಗೌಡ, ಕೇಶವಮೂರ್ತಿ, ಕಮ್ಮಸಂದ್ರ ಚಂದ್ರಪ್ಪ, ಇಂಜಿನಿಯರ್ ಶ್ರೀನಿವಾಸ್ ಇತರರು ಇದ್ದರು.