ಸೇವಾನಗರಕ್ಕೆ ಬಸ್ ಸೇವೆ ಇಲ್ಲ!

ಸೇವಾನಗರ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಅಖಿಲ ಭಾರತ ವಿದ್ಯಾರ್ಥಿ ಸಂಘದ ವತಿಯಿಂದ ಡಿಪೋ ವ್ಯವಸ್ಥಾಪಕಿ ಸುಶೀಲಾ ಅವರಿಗೆ ಮನವಿ ಸಲ್ಲಿಸಲಾಯಿತು. ತಾಲೂಕು ಘಟಕದ ಅಧ್ಯಕ್ಷ ಕೆ. ಮೋಹನ್ ಕುಮಾರ್, ಉಪಾಧ್ಯಕ್ಷ ಕೃಷ್ಣಾ ಯಾದವ್, ಕಾರ್ಯದರ್ಶಿ ತಿಲಕ್ ಕುಮಾರ್, ಸದಸ್ಯರಾದ ವಿನಯ್, ಹರೀಶ್ ಇತರರಿದ್ದರು.

Published on
ಹರಪನಹಳ್ಳಿ: ಸೇವಾನಗರ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಅಖಿಲ ಭಾರತ ವಿದ್ಯಾರ್ಥಿ ಸಂಘದಿಂದ ಸೋಮವಾರ ಡಿಪೋ ವ್ಯವಸ್ಥಾಪಕಿ ಸುಶೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ಹತ್ತಾರು ವರ್ಷಗಳಿಂದ ಗ್ರಾಮಸ್ಥರಿಗೆ ಸಾರಿಗೆ ಸೌಲಭ್ಯವಿಲ್ಲದೆ ಮಹಿಳೆಯರು, ಮಕ್ಕಳು, ಹಿರಿಯರು ಸಂಕಷ್ಟ ಅನುಭವಿಸುವಂತಾಗಿದೆ. 
ದೂರದ ಊರುಗಳಿಗೆ ತೆರಳಬೇಕೆಂದರೆ, ಸೇವಾನಗರದಿಂದ 2 ಕಿ.ಮೀ. ಅಂತರವಿರುವ ಬೆಂಡಿಗೇರಿ ಗ್ರಾಮಕ್ಕೆ ಬಂದು ಅಲ್ಲಿಂದಲೇ  ದಾವಣಗೆರೆ, ಹರಪನಹಳ್ಳಿಗೆ ತೆರಳಬೇಕಿದೆ. ಮಳೆಗಾಲದಲ್ಲಿ ಕೆಸರಿನಲ್ಲಿ, ಬಟ್ಟೆ ಒದ್ದೆ ಮಾಡಿಕೊಂಡೇ ವಿದ್ಯಾರ್ಥಿಗಳು ಸಂಚರಿಸಬೇಕಿದೆ ಎಂದರು. 
ಹರಪನಹಳ್ಳಿ ಸಾರಿಗೆ ವ್ಯವಸ್ಥಾಪಕಿ ಸುಶೀಲಾ ಮಾತನಾಡಿ, ಶೀಘ್ರದಲ್ಲಿ ನಿತ್ಯ 4 ಸಾರಿಗೆ ಬಸ್‌ಗಳನ್ನು ಗ್ರಾಮದ ಮೂಲಕ ಹರಪನಹಳ್ಳಿ ಮತ್ತು ದಾವಣಗೆರೆಗೆ ಸಾರಿಗೆ ಸೌಲಭ್ಯ ಕಲ್ಪಿಸಿಕೊಡುವ ಭರವಸೆ ನೀಡಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net