ಕನ್ನಡ ಕಲಿಕೆ, ಸಾಹಿತ್ಯ ಅಧ್ಯಯನಕ್ಕೆ ದಾರಿದ್ರವಿಲ್ಲ

ಗುಲ್ಬರ್ಗ ಹರಿಹರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಸಂದ ಕಾರ್ಯಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಪ್ರೊ.ಎಸ್​.ಎಂ.ಹಿರೇಮಠ್​, ಪ್ರೊ.ಎಚ್​.ಟಿ.ಪೋತೆ, ಡಾ.ಶ್ರೀಶೈಲ ನಾಗರಾಳ, ಡಾ.ಸೂರ್ಯಕಾಂತ್​ ಸುಜ್ಯಾತ್​ ಇತರರಿದ್ದರು.
ಗುಲ್ಬರ್ಗ ಹರಿಹರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಸಂದ ಕಾರ್ಯಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಪ್ರೊ.ಎಸ್​.ಎಂ.ಹಿರೇಮಠ್​, ಪ್ರೊ.ಎಚ್​.ಟಿ.ಪೋತೆ, ಡಾ.ಶ್ರೀಶೈಲ ನಾಗರಾಳ, ಡಾ.ಸೂರ್ಯಕಾಂತ್​ ಸುಜ್ಯಾತ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಹಿರೇಮಠ ಹೇಳಿಕೆ
  • ಗುವಿವಿ ಕನ್ನಡ ಸಾಹಿತ್ಯ ಸಂದ ಕಾರ್ಯಚಟುವಟಿಕೆಗೆ ಚಾಲನೆ
ಕಲಬುರಗಿ: ಕನ್ನಡ ಕಲಿಕೆ ಮತ್ತು ಸಾಹಿತ್ಯ ಅಧ್ಯಯನಕ್ಕೆ ದಾರಿದ್ರವಿಲ್ಲ. ಸ್ವಯಂ ನಿರ್ಧಾರದಿಂದ ವಿದ್ಯಾರ್ಥಿಗಳು ಸಾಹಿತ್ಯ ಕಲಿಕೆ ಅಪ್ಪಿಕೊಳ್ಳುತ್ತಿದ್ದಾರೆ. ಕನ್ನಡ ಅಧ್ಯಯನ ಸಂಸ್ಥೆಯ ಸೂಕ್ತ ಪರಿಸರ, ವ್ಯವಸ್ಥಿತ ಸೌಲಭ್ಯದಿಂದ ವಿದ್ಯಾರ್ಥಿಗಳ ಮನಸ್ಸು ಆಕರ್ಷಿಸಿ ಸಾಹಿತ್ಯ ಜ್ಞಾನ ಹಂಚುತ್ತಿರುವುದು ಶ್ಲಾನೀಯ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಸ್​.ಎಂ.ಹಿರೇಮಠ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಂದ ಕಾರ್ಯಚಟುವಟಿಕೆಗಳ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ವಿಭಾಗದ ಅಧ್ಯಾಪಕರ ಅಪಾರ ಜ್ಞಾನ ಮತ್ತು ಅನುಭವದಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ಮತ್ತು ಸ್ವಸಾಮರ್ಥ್ಯ ಬೆಳೆಯುತ್ತಿದೆ. ಸಾಹಿತ್ಯ ಬೋಧನೆ ಮತ್ತು ಸಂಶೋಧನೆಗೆ ಅಗತ್ಯ ಸಾಮಾಗ್ರಿ ಒದಗಿಸಿರುವ ಪ್ರೊ.ಪೋತೆ ಅವರ ದೂರದೃಷ್ಟಿ ಮತ್ತು ಬದ್ಧತೆ ಎದ್ದು ಕಾಣುತ್ತದೆ ಎಂದರು.
ಸಂದರ್ಶಕ ಪ್ರಾಧ್ಯಾಪಕ ಡಾ.ಶ್ರೀಶೈಲ ನಾಗರಾಳ ಮಾತನಾಡಿ, ಕನ್ನಡ ಅಧ್ಯಯನ ಸಂಸ್ಥೆ ವಿಶ್ವವಿದ್ಯಾಲಯದ ಮುಕುಟ ಹಾಗೂ ಸಾಂಸತಿಕ ಕೇಂದ್ರವಾಗಿದೆ. ಐದು ದಶಕಗಳಿಂದ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಕೆಎಎಸ್​, ಐಎಎಸ್​ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಬರವಣಿಗೆ ಕೃಷಿ ಮೂಲಕ ಖ್ಯಾತ ಬರಹಗಾರರು, ಲೇಖಕರು, ಚಿಂತಕರನ್ನು ಬೆಳೆಸಿದೆ ಎಂದು ಶ್ಲಾಸಿದರು.
ಡಾ.ಸೂರ್ಯಕಾಂತ್​ ಸುಜ್ಯಾತ್​ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಬಡತನ, ಲಿಂಗ, ಜಾತಿ ಅಡ್ಡಿಯಾಗುವುದಿಲ್ಲ. ಗುರುಗಳ ಮಾರ್ಗದರ್ಶನದಲ್ಲಿ ಕನಸು ನನಸು ಮಾಡಿಕೊಳ್ಳಿ. ಎಲ್ಲೆಡೆ ಕೃತಕ ಬುದ್ಧಿಮತ್ತೆ ಬಗ್ಗೆ ಚರ್ಚೆ ನಡೆದಿದೆ. ಕಲಿಕೆ ಜತೆಗೆ ಇತರ ವಿಷಯಗಳ ಬಗ್ಗೆ ಪೂರಕ ಜ್ಞಾನ ಮತ್ತು ತಂತ್ರ, ಕೌಶಲ ಜ್ಞಾನ ರೂಢಿಸಿಕೊಂಡರೆ ಭವಿಷ್ಯದಲ್ಲಿ ಯಶಸ್ವಿ ಕಾಣಬಹುದು ಎಂದರು.
ಕಲಾನಿಕಾಯ ಡೀನ್​ ಹಾಗೂ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್​.ಟಿ. ಪೋತೆ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ರಾಹುಲ್​ ಎಂ.ಕೆ., ಐಶ್ವರ್ಯ, ಆಶಿಫ್​, ಡಾ.ಎಂ.ಬಿ.ಕಟ್ಟಿ, ಡಾ.ಹನುಮಂತ ಮೇಲಕೇರಿ, ಡಾ.ಶಿವಶರಣಪ್ಪ ಕೂಡ್ಲಿ, ಡಾ.ಸಂತೋಷ ಕಂಬಾರ, ಡಾ.ಸುನಿಲ್​ ಜಾಬಾದಿ, ಡಾ.ಜಗನ್ನಾಥ, ಡಾ.ಶಿವಗಂಗಾ ಬಿಲಗುಂದಿ, ಡಾ.ಶೂಲಬಾಯಿ, ಡಾ.ಶೀಲಾಬಾಯಿ ಇತರರಿದ್ದರು.
ಕನ್ನಡ ವಿಷಯದಲ್ಲಿ ನೆಟ್​, ಸೆಟ್​ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸತ್ಕರಿಸಲಾಯಿತು. ಅರುಣ್​ಕುಮಾರ್​ ಪ್ರಾರ್ಥಿಸಿದರು. ಮಲ್ಲಮ್ಮ ಸ್ವಾಗತಿಸಿದರು. ದೇವೇಂದ್ರ ವಂದಿಸಿದರು. ರಮೇಶ್​ ಹಾಗೂ ಐಶ್ವರ್ಯ ನಿರೂಪಣೆ ಮಾಡಿದರು.
"

ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ವಿಭಾಗ ಸಾಹಿತ್ಯ ಭಂಡಾರ, ಗ್ರಂಥಾಲಯ, ಕಕ ಭಾಗದ ಸಾಹಿತಿಗಳ ಪೋಟೋ ಗ್ಯಾಲರಿ, ಸಾಧಕರ ಮಾಹಿತಿ ಜತೆಗೆ ಬೋಧನೆ, ಸಂಶೋಧನೆ, ಗಣ್ಯರ ಉಪನ್ಯಾಸ, ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದೆ. ಆಸಕ್ತಿಯಿಂದ ಅಧ್ಯಯನ ಮಾಡಬೇಕು. ಚನ್ನಮ್ಮ ಹನ್ನೊಂದು ಚಿನ್ನದ ಪದಕ ಪಡೆದಿರುವುದು ವಿಭಾಗಕ್ಕೆ ಹೆಮ್ಮೆಯ ಸಂಗತಿ.

> ಪೊ.ಎಚ್​.ಟಿ.ಪೋತೆ, ನಿರ್ದೇಶಕ,

ಕನ್ನಡ ಅಧ್ಯಯನ ಸಂಸ್ಥೆ, ಗುಲ್ಬರ್ಗ ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net