ಮಹಿಳೆಯ ಕಲಿಕೆ, ಸಾಧನೆಗೆ ವಯಸ್ಸಿನ ಮಿತಿ ಇಲ್ಲ

ಮಂಜುನಾಥ ಮಹಿಳಾ ಮಂಡಳದ 37ನೇ ವಾರ್ಷಿಕೋತ್ಸವದ ಉದ್ಘಾಟನೆ.
ಮಂಜುನಾಥ ಮಹಿಳಾ ಮಂಡಳದ 37ನೇ ವಾರ್ಷಿಕೋತ್ಸವದ ಉದ್ಘಾಟನೆ.
Published on
ಧಾರವಾಡ: ಮಹಿಳೆಯ ಕಲಿಕೆ ಮತ್ತು ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಮಹಿಳೆ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದಾ ಕಾಪಾಡಿಕೊಂಡು ಎಂದು ಕರ್ನಾಟಕ ಕಲಾ ಮಹಾವಿದ್ಯಾಲಯದ ಸಂಸತ, ಪ್ರಾಕೃತ ಮತ್ತು ಯೋಗ ವಿಭಾಗಗಳ ಮುಖ್ಯಸ್ಥೆ ಡಾ. ರಜನಿ ಎಚ್​. ಹೇಳಿದರು.
ಇಲ್ಲಿನ ಶಿವಗಿರಿಯ ಮಂಜುನಾಥ ಕಾಲನಿಯ ಸಮುದಾಯ ಭವನದಲ್ಲಿ ಮಂಜುನಾಥ ಮಹಿಳಾ ಮಂಡಳದ 37ನೇ ವಾಷಿರ್ಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಸಕಾರಾತ್ಮಕ ಆಲೋಚನೆಗಳ ಮೂಲಕ ತನ್ನ ಕುಟುಂಬ ಮತ್ತು ಸಮಾಜವನ್ನು ಕಟ್ಟುವಲ್ಲಿ ಮೌಲಿಕ ಪಾತ್ರ ವಹಿಸಬೇಕು. ಸಂಸಾರದ ಜವಾಬ್ದಾರಿಗಳೊಂದಿಗೆ ಸಮಾಜಮುಖಿಯಾಗಿ ಮುಂದೆ ಬಂದಾಗ ಮಾತ್ರ ನಮ್ಮ ಸಮಾಜ ಸಾಂಸತಿಕವಾಗಿ ಸಮೃದ್ಧಗೊಳ್ಳಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮಂಡಳದ ಮಹಾದೇವಿ ಮುಳಗುಂದ ಮಾತನಾಡಿ, ಸತತ 37 ವರ್ಷಗಳಿಂದ ನಮ್ಮ ಹಬ್ಬಗಳ ಆಚರಣೆ, ಕಲೆ, ಸಂಸತಿಯ ಪರಂಪರೆಯನ್ನು ಉಳಿಸಿ ಬೆಳೆಸಿಕೊಳ್ಳುತ್ತ ಮುಂದಿನ ತಲೆಮಾರಿಗೆ ಸಾಗಿಸುವ ಹಿನ್ನೆಲೆಯಲ್ಲಿ ನಿರಂತರವಾಗಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಸಾಗಿದೆ ಎಂದರು.
ಕಾರ್ಯದಶಿರ್ ಆರತಿ ಸಬರದ ವಾಷಿರ್ಕ ವರದಿ ಮಂಡಿಸಿದರು. ಮಹಿಳೆಯರಿಗೆ ಉಡಿ ತುಂಬಲಾಯಿತು. ನಂತರ ಹಾಡು, ನೃತ್ಯ, ನಾಟಕ, ಪ್ಯಾಷನ್​ ಶೋ ಕಲೆ ಪ್ರದಶಿರ್ಸಿದರು.
ಮಂಡಳದ ನಿರ್ದೇಶಕಿ ಶಶಿಕಲಾ ಮುಗದುಮ್​, ಹಿರಿಯರಾದ ಅಜಿತಾ ಮನಸೂಳಿ, ಕಲಾವತಿ ಭೋವಿಶೆಟ್ಟಿ, ಸದಸ್ಯರು ಮತ್ತು ಕಾಲನಿಯ ಮಹಿಳೆಯರು ಭಾಗವಹಿಸಿದ್ದರು.
ವಾಣಿ ಹದ್ಲಿ ಪ್ರಾಥಿರ್ಸಿದರು, ಸುರೇಖಾ ಪಾಟೀಲ ಪರಿಚಯಿಸಿದರು. ಲಲಿತಾ ಪಾಟೀಲ ಸ್ವಾಗತಿಸಿದರು. ವಿದ್ಯಾ ನೇಸರಗಿ ನಿರೂಪಿಸಿದರು. ರೇಣುಕಾ ನ್ಯಾಮಗೌಡ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net