ಭಾರತದ ಸಂವಿಧಾನವು ದೇಶಾದ್ಯಂತ ಎಲ್ಲ ನಾಗರಿಕರಿಗೆ ಒಂದೇ ಪೌರತ್ವವನ್ನು ಕಲ್ಪಿಸುತ್ತದೆ. ಆದರೆ, ರಾಜ್ಯ ಸರ್ಕಾರವು ಶಾಶ್ವತ ನಿವಾಸ ಪ್ರಮಾಣಪತ್ರವನ್ನು ನೀಡುವುದು ಈ ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ, ಇದರಡಿ ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಅಽಕಾರವಿಲ್ಲದೆ ಶಾಶ್ವತ ನಿವಾಸಿಗಳು ಎಂಬ ಪ್ರತ್ಯೇಕ ವರ್ಗವನ್ನು ರಚಿಸಲು ಪ್ರಯತ್ನಿಸುತ್ತದೆ. ಅಂತಹ ವರ್ಗೀಕರಣವು ಅನಿಯಂತ್ರಿತವಾಗಿದೆ, ಯಾವುದೇ ಕಾನೂನುಬದ್ಧ ಸಾಂವಿಧಾನಿಕ ಉದ್ದೇಶದೊಂದಿಗೆ ತರ್ಕಬದ್ಧ ಸಂಬAಧ ಹೊಂದಿಲ್ಲ ಮತ್ತು ಇದು ಸಂವಿಧಾನದ ೧೪ನೇ ವಿಽಯನ್ನು ಉಲ್ಲಂöಸುತ್ತದೆ ಎಂದು ಹೇಳಿದರು.