ಬ್ರೇಕ್ ಫಾಸ್ಟ್ ಚೆನ್ನಾಗಿತ್ತು. ನಾನು, ಡಿಸಿಎಂ ಮತ್ತು ಪೊನ್ನಣ್ಣ ತಿಂಡಿಯಲ್ಲಿ ಭಾಗಿಯಾಗಿದ್ದೆವು. ನಾವು ಅಲ್ಲಿ ಯಾವುದೇ ವಿಚಾರವನ್ನು ಮಾತನಾಡಲಿಲ್ಲ. ಡಿಕೆಶಿ ಅವರು ಇಂದು ನಮ್ಮ ಮನೆಗೆ ಬಂದಿದ್ದರು. ನಾವಿಬ್ಬರು ಒಟ್ಟಿಗೆ ಬ್ರೇಕ್ಫಾಸ್ಟ್ ಮಾಡಿದ್ದೇವೆ. ಏಕೆಂದರೆ, ನಮ್ಮ ಹೈಕಮಾಂಡ್ನವರು ಅಂದರೆ, ವೇಣುಗೋಪಾಲ್ ಅವರು ಮೊನ್ನೆಯೇ ಪೊನ್ನಣ್ಣ ಅವರಿಗೆ ಫೋನ್ ಮಾಡಿದ್ದರು. ಡಿಕೆಶಿ ಅವರನ್ನು ಬ್ರೇಕ್ಫಾಸ್ಟ್ಗೆ ಕರೆಯಿರಿ ಅಂತ ಹೇಳಿ ಫೋನ್ ಮಾಡಿದ್ದರು. ಇದೇ ವೇಳೆ ಡಿಕೆಶಿ ಅವರು ಕೂಡ ಫೋನ್ ಮಾಡಿ, ಊಟಕ್ಕೆ ಬರುವಂತೆ ಕರೆದರು. ಆದರೆ, ನನಗೆ ಹೈಕಮಾಂಡ್ ಹೇಳಿದ್ದರಿಂದ ನಾನೇ ಬ್ರೇಕ್ಫಾಸ್ಟ್ಗೆ ಕರೆದೆ ಮತ್ತು ಮತ್ತೊಂದು ದಿನ ಊಟಕ್ಕೆ ಅವರ ಮನೆಗೆ ಹೋಗುವುದಾಗಿ ಹೇಳಿದೆ. ಇಬ್ಬರು ಬ್ರೇಕ್ಫಾಸ್ಟ್ ವೇಳೆ ಉಭಯ ಕುಶಲೋಪರಿ ನಡೆಸಿದೆವು ಎಂದು ಸಿದ್ದರಾಮಯ್ಯ ಹೇಳಿದರು.