ಗಮನ ಸೆಳೆದ ವಿಷಯವಾರು ವಸ್ತು ಪ್ರದರ್ಶನ

 ಹನೂರಿನ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಷಯವಾರು ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಗಣ್ಯರಿಗೆ ಮಾದರಿಗಳ ಬಗ್ಗೆ ಮಾಹಿತಿ ನೀಡಿದರು. ರಾಜೇಂದ್ರನ್, ಮಧುಸೂದನ್, ಸತ್ಯಪ್ರಿಯಾ, ನಂಜುಂಡಯ್ಯ, ಶಿವಶಂಕರನಾಯ್ಕ ಇತರರು ಇದ್ದರು.
ಹನೂರಿನ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಷಯವಾರು ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಗಣ್ಯರಿಗೆ ಮಾದರಿಗಳ ಬಗ್ಗೆ ಮಾಹಿತಿ ನೀಡಿದರು. ರಾಜೇಂದ್ರನ್, ಮಧುಸೂದನ್, ಸತ್ಯಪ್ರಿಯಾ, ನಂಜುಂಡಯ್ಯ, ಶಿವಶಂಕರನಾಯ್ಕ ಇತರರು ಇದ್ದರು.
Published on
ಹನೂರು: ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲ, ಬಿಳಿಗಿರಿರಂಗನಬೆಟ್ಟ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಆಹಾರ ಪದ್ಧತಿ, ಪರಿಸರ ಸಮತೋಲನ, ವಿಜ್ಞಾನದ ಪ್ರಾಯೋಗಿಕ ವೈಶಿಷ್ಟೃಗಳು, ಕನ್ನಡ, ಇಂಗ್ಲಿಷ್‌ನ ಭಾಷಾ ಸ್ವಾದ, ವಿಶೇಷತೆ ಹಾಗೂ ಇತಿಹಾಸ ಸಾರುವ ನಾಡಿನ ದೇಗುಲಗಳು, ಪ್ರೇಕ್ಷಣಿಯ ಸ್ಥಳಗಳು...

ಇದು ಪಟ್ಟಣದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ವಿಷಯವಾರು ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳಿಂದ ಅನಾವರಣಗೊಂಡ ವಿವಿಧ ಮಾದರಿಗಳು. ಈ ವಸ್ತು ಪ್ರದರ್ಶನದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಇತಿಹಾಸ ಹಾಗೂ ಕಂಪ್ಯೂಟರ್ ಸೈನ್ಸ್‌ಗೆ ಸಂಬಂಧಿಸಿದಂತೆ ಎಲ್‌ಕೆಜಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು 196 ಮಾದರಿಗಳನ್ನು ತಯಾರಿಸಿ ಪ್ರತ್ಯೇಕ ಕೊಠಡಿಗಳಲ್ಲಿ ಪ್ರದರ್ಶನಕ್ಕಿರಿಸಲಾಗಿತ್ತು.
ಗಣ್ಯರು ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಮಾದರಿಗಳ ಸಂಪೂರ್ಣ ಮಾಹಿತಿ ಹಾಗೂ ವಿಶೇಷತೆಯನ್ನು ವಿದ್ಯಾರ್ಥಿಗಳು ಉತ್ಸಾಹ ಹಾಗೂ ಲವಲವಿಕೆಯಿಂದ ವಿವರಣೆಯೊಂದಿಗೆ ತಿಳಿಸಿಕೊಟ್ಟರು. ಒಂದು ಕೊಠಡಿಯಲ್ಲಿ ಮಾದಪ್ಪನ ದೇಗುಲ ಸೇರಿದಂತೆ ವಿವಿಧ ದೇಗುಲದ ಮಾದರಿ ಇರಿಸಲಾಗಿದ್ದು, ಧೂಪದ ಘಮಲು ಎಲ್ಲರಲ್ಲೂ ದೈವಿಕ ಭಾವನೆಯನ್ನು ಮೂಡಿಸಿತು. ವಿಷಯವಾರು ವಸ್ತು ಪ್ರದರ್ಶನ ಬಗ್ಗೆ ಗಣ್ಯರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಯಿತು. ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ ನೀಡಲಾಯಿತು.

ಸಂಸ್ಥೆ ಪ್ರಾಂಶುಪಾಲ ಮಧುಸೂದನ್ ಮಾತನಾಡಿ, ಪ್ರತಿ ವಿದ್ಯಾರ್ಥಿಯಲ್ಲೂ ಸೃಜನಶೀಲತೆಯ ಜತೆಗೆ ಪ್ರತಿಭೆ ಇದ್ದೇ ಇರುತ್ತದೆ. ಹಾಗಾಗಿ ಪ್ರತಿ ವರ್ಷ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವ ಸಲುವಾಗಿ ವಿಷಯವಾರು ವಸ್ತು ಪ್ರದರ್ಶನ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಮಾದರಿಗಳ ತಯಾರಿಕೆಯಲ್ಲಿ ಉತ್ತಮ ಜ್ಞಾನವನ್ನು ಹೊಂದುವುದರ ಮೂಲಕ ಅಧ್ಯಯನಕ್ಕೆ ಅನುಕೂಲತೆ ಪಡೆಯುವಂತಾಗಿದೆ. ಇದಕ್ಕೆ ಶಿಕ್ಷಕರು ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ವಸ್ತು ಪ್ರದರ್ಶನ ಎಲ್ಲ ಮಕ್ಕಳಲ್ಲೂ ಕಲಿಕೆಯನ್ನು ಬಲಗೊಳಿಸಲು ಸಹಕಾರಿಯಾಗಿದೆ ಎಂದರು.

ಸಂಸ್ಥೆ ಸಂಚಾಲಕ ರಾಜೇಂದ್ರನ್, ಮುಖ್ಯಶಿಕ್ಷಕಿ ಸತ್ಯಪ್ರಿಯಾ, ಶಿಕ್ಷಣ ಸಂಯೋಜಕರಾದ ಅಶೋಕ್, ರವೀಂದ್ರ, ಸಂಪನ್ಮೂಲ ವ್ಯಕ್ತಿಗಳಾದ ಉಪನ್ಯಾಸಕ ನಂಜುಂಡಯ್ಯ, ಮುಖ್ಯ ಶಿಕ್ಷಕ ಶಿವಶಂಕರನಾಯ್ಕ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net