ಎರಡು ಕಡೆ ಶ್ರೀಗಂಧದ ಮರಗಳ ಕಳವು / DODABALLAPUR

ದೊಡ್ಡಬಳ್ಳಾಪುರದ ಬಿಎಸ್​ಎನ್​ಎಲ್​ ಕಚೇರಿ ಹಿಂಭಾಗ ಮತ್ತು ಸರ್ಕಾರಿ ಶಾಲಾ ಆವರಣದಲ್ಲಿ ಶ್ರೀಗಂಧ ಮರಗಳನ್ನು ಕತ್ತರಿಸಿರುವುದು.
ದೊಡ್ಡಬಳ್ಳಾಪುರದ ಬಿಎಸ್​ಎನ್​ಎಲ್​ ಕಚೇರಿ ಹಿಂಭಾಗ ಮತ್ತು ಸರ್ಕಾರಿ ಶಾಲಾ ಆವರಣದಲ್ಲಿ ಶ್ರೀಗಂಧ ಮರಗಳನ್ನು ಕತ್ತರಿಸಿರುವುದು.
Published on
ದೊಡ್ಡಬಳ್ಳಾಪುರ : ನಗರ ಠಾಣೆ ವ್ಯಾಪ್ತಿಯಲ್ಲಿ ಒಂದೇ ರಾತ್ರಿ ಎರಡು ಸ್ಥಳಗಳಲ್ಲಿ ಶ್ರೀಗಂಧದ ಮರಗಳನ್ನು ಕತ್ತರಿಸಿ ಕದ್ದೊಯ್ಯಲಾಗಿದೆ. ತಾಲೂಕು ಕಚೇರಿ ಹಿಂಭಾಗದಲ್ಲಿರುವ ಕಚೇರಿಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣ ಹಾಗೂ ಬಿಎಸ್​ಎನ್​ಎಲ್​ ಕಚೇರಿ ಹಿಂಭಾಗದ ದರ್ಗಾ ಮುಂದೆ ಇರುವ ಸ್ಮಶಾನದಲ್ಲಿದ್ದ ತಲಾ ಒಂದೊಂದು ಶ್ರೀಗಂಧದ ಮರವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ.
ಜೂ.13ರ ರಾತ್ರಿ ಕೃತ್ಯನಡೆದಿರುವ ಶಂಕೆ ವ್ಯಕ್ತವಾಗಿದ್ದು, 14ರಂದು ಭಾನುವಾರ ರಜೆ ಇದ್ದ ಕಾರಣ ಟನೆ ತಕ್ಷಣ ಬೆಳಕಿಗೆ ಬಂದಿರಲಿಲ್ಲ. ಸೋಮವಾರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ವೇಳೆ ಮರಗಳು ಕಳವಾಗಿರುವುದು ಗೊತ್ತಾಗಿದೆ. ಎರಡು ಸ್ಥಳಗಳಲ್ಲೂ ಮರಗಳನ್ನು ವೃತ್ತಿಪರ ರೀತಿಯಲ್ಲಿ ಕತ್ತರಿಸಿ ಸಾಗಿಸಿರುವ ಸಾಧ್ಯತೆ ಇದ್ದು, ಮರಗಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕಳುವಾದ ಶ್ರೀಗಂಧದ ಮರಗಳ ಮೌಲ್ಯ ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವವರ ಕುರಿತು ತನಿಖೆ ಮುಂದುವರಿದಿದೆ. ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net