ಖಾಸಗಿ ವ್ಯಕ್ತಿಗಳಿಂದ ಹಣ ಎಣಿಕೆ?: ಅಯೋಧ್ಯೆ ರಾಮ ಮಂದಿರದ ಹುಂಡಿ ಹಣ ಕಳವು ಪ್ರಕರಣದ ನಂತರ ಎಚ್ಚೆತ್ತ ರಾಜ್ಯ ಸರ್ಕಾರವು ಜು.14 ರಿಂದ ಹುಂಡಿ ಎಣಿಕೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಅದರಂತೆ ಪ್ರಮುಖವಾಗಿ ಹುಂಡಿ ಎಣಿಕೆಗೆ ಖಾಸಗಿ ವ್ಯಕ್ತಿಗಳು ಅಥವಾ ಸ್ಥಳಿಯರು ಎಣಿಕೆ ಕಾರ್ಯದಲ್ಲಿ ಭಾಗವಹಿಸಬಾರದು ಎಂದು ಸ್ಪಷ್ಟವಾಗಿ ಉಲ್ಲೆಖ ಮಾಡಿದೆ. ಆದರೆ ದೇವಾಲಯ ಅಧಿಕಾರಿಗಳು, ಸಿಬ್ಬಂದಿ ಜತೆಗೆ 20ಕ್ಕೂ ಹೆಚ್ಚು ಮುಳಬಾಗಿಲಿನ ಖಾಸಗಿ ಸ್ವಯಂ ಸೇವಾ ಮಹಿಳೆಯರ ಮೂಲಕ ಎಣಿಕೆ ಮಾಡಿಸಿದ್ದಾರೆ. ಅಲ್ಲದೆ ಸ್ಥಳಿಯ ಮುಖಂಡರನ್ನೂ ಉಸ್ತುವಾರಿಗೆ ನೇಮಿಸಿದ್ದರು ಎನ್ನಲಾಗಿದ್ದು, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿವೆ.