ಹಿಂದೆ ಕಲೆಗೆ ಮಾರುಹೋಗಿ ಗ್ರಾಮದ ಗೌಡರು, ದೇಶಪಾಂಡೆಗಳು ಕಲಾವಿದರಿಗೆ ಎಕರೆಗಟ್ಟಲೆ ಜಮೀನುಗಳನ್ನು ದಾನವಾಗಿ ನೀಡುತ್ತಿದ್ದರು. ಆದರೆ ಇಂದು ಕಲಾವಿದರಿಗೆ ಬದುಕು ನಡೆಸುವುದು ಕಷ್ಟಕರವಾಗಿದೆ. ತಬಲಾ, ಹಾರ್ಮೋನಿಯಂ ಅಂತಹ ಮೂಲ ವಾದ್ಯಗಳನ್ನು ನಂಬಿ ಬದುಕುತ್ತಿರುವ ಕಲಾವಿದರ ಸ್ಥಿತಿ ಚಿಂತಾಜನಕವಾಗಿದೆ. ಜಾನಪದ ಕಲೆ ಎಂದರೆ ಕೇವಲ ಮನರಂಜನೆಯಲ್ಲ, ಅದೊಂದು ಶಿಸ್ತುಬದ್ಧ ಜೀವನ ಕ್ರಮ ಎಂದು ಅವರು ಬಣ್ಣಿಸಿದರು.