ಕಕ್ಕೇರಿ ಗ್ರಾಮದಲ್ಲಿ ರೈತ ದಿನ ಆಚರಿಸಲಾಯಿತು. ರಾಮಾನಂದ ಸ್ವಾಮೀಜಿ, ಕಿಶೋರ ಮಿಠಾರಿ, ರವಿರಾಜ ಕಂಬಳಿ, ಸುರೇಶ ತಿಗಡಿ, ಕೊಟ್ರೇಶ ಹಿರೇಮಠ ಇತರರಿದ್ದರು.
Published on:
Copied
Follow Us
ಕಕ್ಕೇರಿ: ಕಷ್ಟಪಟ್ಟು ದುಡಿಯುವ ರೈತರು ಜಗತ್ತಿನ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ಧಾರೂಢ ಮಠದ ರಾಮಾನಂದ ಸ್ವಾಮೀಜಿ ಹೇಳಿದರು.
ಸ್ಥಳಿಯ ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಅಖಿಲ ಕರ್ನಾಟಕ ರೈತ ಸಂ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಖಿಲ ಕರ್ನಾಟಕ ರೈತ ಸಂದ ಉಪಾಧ್ಯ ಕಿಶೋರ ಮಿಠಾರಿ, ರವಿರಾಜ ಕಂಬಳಿ ಮಾತನಾಡಿ, ರೈತ ಸಾಲಗಾರನಲ್ಲ. ಸರ್ಕಾರವೇ ಬಾಕಿದಾರ. ರೈತರ ಬೆಳೆಗಳಿಗೆ ಸರ್ಕಾರ ಸೂಕ್ತ ಬೆಲೆ ನಿಗದಿಗೊಳಿಸಿ ನೆರವಿಗೆ ಮುಂದಾಗಬೇಕು ಎಂದರು.