ಪರಿಸರ ಸ್ನೇಹಿ ಬಳಗದ ಕಾರ್ಯ ಶ್ಲಾಘನೀಯ

ಹುಣಸಗಿ ಹೊರ ವಲಯದ ಕರಿಗುಡ್ಡದ ಪ್ರದೇಶದಲ್ಲಿ ಪರಿಸರ ಸ್ನೇಹಿ ಬಳಗದ ಸದಸ್ಯರಿಂದ ಈ ಹಿಂದೆ ನೆಟ್ಟಿರುವ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರುಣಿಸುತ್ತಿರುವುದು. ಮಹಾದೇವಿ ಬೇನಾಳಮಠ, ಗುರು ಹುಲಕಲ್, ಬಸವರಾಜ ತೆಗ್ಗೆಳ್ಳಿ, ವೆಂಕಟೇಶ, ಕಾಂತೇಶ ಹಲಗಿಮನಿ, ಯಂಕನಗೌಡ ಅರಕೇರಿ, ಗುರಣ್ಣಗೌಡ ಹೊರಗಿನಮನಿ ಇತರರಿದ್ದರು.
ಹುಣಸಗಿ ಹೊರ ವಲಯದ ಕರಿಗುಡ್ಡದ ಪ್ರದೇಶದಲ್ಲಿ ಪರಿಸರ ಸ್ನೇಹಿ ಬಳಗದ ಸದಸ್ಯರಿಂದ ಈ ಹಿಂದೆ ನೆಟ್ಟಿರುವ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರುಣಿಸುತ್ತಿರುವುದು. ಮಹಾದೇವಿ ಬೇನಾಳಮಠ, ಗುರು ಹುಲಕಲ್, ಬಸವರಾಜ ತೆಗ್ಗೆಳ್ಳಿ, ವೆಂಕಟೇಶ, ಕಾಂತೇಶ ಹಲಗಿಮನಿ, ಯಂಕನಗೌಡ ಅರಕೇರಿ, ಗುರಣ್ಣಗೌಡ ಹೊರಗಿನಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರಿಗುಡ್ಡದ ಪ್ರದೇಶದ ೭೦೦ಕ್ಕೂ ಅಽಕ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು
ಹುಣಸಗಿ : ಮಳೆ ಕೊರತೆಯಿಂದಾಗಿ ಗಿಡಗಳು ಒಣಗುತ್ತಿರುವುದನ್ನು ಗಮನಿಸಿದ ಪರಿಸರ ಸ್ನೇಹಿ ಬಳಗದ ಸದಸ್ಯರು ಟ್ಯಾಂಕರ್ ಮೂಲಕ ನೀರುಣಿಸುತ್ತಿರುವುದು ಒಳ್ಳೆಯ ಕೆಲಸ ಎಂದು ರಾಜ್ಯ ರೈತ ಸಂಘದ ಸದಸ್ಯೆ ಮಹಾದೇವಿ ಬೇನಾಳಮಠ ಹೇಳಿದರು.
ಹುಣಸಗಿ ಪಟ್ಟಣದಲ್ಲಿ ಪರಿಸರ ಸ್ನೇಹಿ ಗೆಳೆಯರ ಬಳಗದ ಸದಸ್ಯರು ಶನಿವಾರ ಹಮ್ಮಿಕೊಂಡ ಮರ-ಗಿಡಗಳಿಗೆ ನೀರುಣಿಸುವ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಳೆ ಮುನಿಸಿಕೊಂಡಿದ್ದು, ರೈತರು ತೀರಾ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಬಳಗದ ಸದಸ್ಯರು ಒಣಗುತ್ತಿರುವ ಗಿಡಗಳಿಗೆ ನೀರುಣಿಸುತ್ತಿರುವು ಮಾದರಿ ಕೆಲಸವಾಗಿದೆ ಎಂದರು.
ಪರಿಸರ ಸ್ನೇಹಿ ಬಳಗದಿಂದ ಕಳೆದ ಕೆಲ ದಿನಗಳ ಹಿಂದೆ ಇಲ್ಲಿನ ಕರಿಗುಡ್ಡದ ಪ್ರದೇಶದಲ್ಲಿ ಸುಮಾರು ೭೦೦ಕ್ಕೂ ಹೆಚ್ಚು ಸಸಿಗಳು ನೆಡಲಾಗಿತ್ತು. ಆದರೆ ಮಳೆ ಬಾರದಿದ್ದರಿಂದ ಸಸಿಗಳು ಬಾಡುತ್ತಿವುದನ್ನು ಕಂಡು ಟ್ಯಾಂಕರ್‌ಗೆ ತಗಲುವ ವೆಚ್ಚವನ್ನು ಸ್ವತಃ ತಾವೇ ಭರಿಸಿಕೊಂಡು ಈ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.
ಗೆಳೆಯರ ಬಳಗದ ಸದಸ್ಯ ಗುರು ಹುಲಕಲ್, ಬಸವರಾಜ ತೆಗ್ಗೆಳ್ಳಿ ಮಾತನಾಡಿ, ಬಹಳಷ್ಟು ಕಷ್ಟ ಪಟ್ಟು ತಗ್ಗುಗಳನ್ನು ತೆರೆದು ಸಸಿಗಳನ್ನು ಹಚ್ಚಿದ್ದೇವೆ. ಆದರೆ ಅವುಗಳ ಪೂಷಣೆ ಮಾಡುವುದು ಕೂಡ ನಮ್ಮ ಕೆಲಸವಾಗಿದೆ. ಎಲ್ಲ ಸದಸ್ಯರು ಬೆಳಿಗಿನ ವಾಯು ವಿಹಾರದ ಬಳಿಕ ಒಟ್ಟಾಗಿ ಟ್ಯಾಂಕರ್‌ಗಳ ಮೂಲಕ ಸಸಿಗೆ ನೀರುಣಿಸುತ್ತಿರುವುದಾಗಿ ಹೇಳಿದರು.
ಈ ವೇಳೆ ವೆಂಕಟೇಶ, ಕಾಂತೇಶ ಹಲಗಿಮನಿ, ಯಂಕನಗೌಡ ಅರಕೇರಿ, ಗುರಣ್ಣಗೌಡ ಹೊರಗಿನಮನಿ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net