

ಮಧುಗಿರಿಯಿಂದ ಎಲೆಕ್ಯಾತನಹಳ್ಳಿ ಸಂಪರ್ಕಿಸುವ ಈ ರಸ್ತೆಯಲ್ಲಿ ನಿತ್ಯ ಶಾಲಾ ವಾಹನಗಳು, ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ಹೋಗುವ ಕಾರ್ಮಿಕರು, ಸುತ್ತಮುತ್ತಲ ಗ್ರಾಮಗಳ ಜನರು ಈ ರಸ್ತೆ ಮಾರ್ಗವಾಗಿ ಸಂಚರಿಸುತ್ತಾರೆ. ರಸ್ತೆ ತಿರುವಿನಲ್ಲೇ ಸುಮಾರು 10 ಅಡಿ ಆಳದ ಗುಂಡಿ ಅಗೆದು ಹಾಗೇ ಬಿಡಲಾಗಿದೆ.
ಗುಂಡಿಯೊಳಗೆಕಬ್ಬಿಣದ ಪೈಪ್ಗಳನ್ನು ಹಾಕಲಾಗಿದೆ. ಆಯ ತಪ್ಪಿ ಕೆಳಕ್ಕೆ ಬಿದ್ದರೆ ಅನಾಹತ ಖಂಡಿತ. ಕೆಲಸಕ್ಕೆ ತೆರಳಲು ಈ ರಸ್ತೆಯಲ್ಲಿ ನಿತ್ಯ ಸಾಗಬೇಕು. ತಿಂಗಳಿನಿಂದ ಗುಂಡಿ ಬಾಯ್ತೆರೆದುಕೊಂಡಿದೆ. ರಸ್ತೆ ಬದಿಗೆ ಇದ್ದರೂ ತಡೆಗೋಡೆಯೂ ಇಲ್ಲ, ಎಚ್ಚರಿಕೆ ನಾಮಫಲಕವು ಇಲ್ಲ. ರಾತ್ರಿ ವೇಳೆ ಎಚ್ಚರ ತಪ್ಪಿದರೆ ಅನಾಹುತ ಖಂಡಿತ. ಅಧಿಕಾರಿಗಳ ರ್ನಿಲಕ್ಷ$್ಯವೇ ಇದಕ್ಕೆ ಕಾರಣ.
ಪೈಪ್ ಲೈನ್ ಕಾಮಗಾರಿ ಮುಚ್ಚದೆ ಹಾಗೇ ಬಿಡಲಾಗಿದೆ. ಅರೆಬರೆ ಕಾಮಗಾರಿ ನಡೆದಿದೆ. ಇದೆಲ್ಲವೂ ನಮ್ಮ ಗಮನಕ್ಕೆ ಬಂದಿದೆ. ಶ್ರೀ ಗುಂಡಿ ಮುಚ್ಚಿಸುವ ಕೆಲಸ ಮಾಡಲಾಗುವುದು. ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವೆವು.