ಸುರಪುರ ಭಕ್ತರ ಕಾರ್ಯ ಮಾದರಿ

ಸುರಾಪುರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಪ್ರಭು ಅಡವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಚನ್ನಬಸವ ದೇವರು, ಶಾಸಕ ವಿಠ್ಠಲ ಹಲಗೇಕರ, ನಾಸೀರ್ ಬಾಗವಾನ ಇತರರಿದ್ದರು.
ಸುರಾಪುರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಪ್ರಭು ಅಡವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಚನ್ನಬಸವ ದೇವರು, ಶಾಸಕ ವಿಠ್ಠಲ ಹಲಗೇಕರ, ನಾಸೀರ್ ಬಾಗವಾನ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಕ್ಕೇರಿ
ಪರಸ್ಪರ ಸಹಕಾರ ಹಾಗೂ ಸೇವಾ ಮನೋಭಾವದಿಂದ ಭಕ್ತರೆಲ್ಲರೂ ಒಗ್ಗೂಡಿ ಸುರಾಪುರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಮಾಡುತ್ತಿರುವ ಕಾರ್ಯ ಮಾದರಿಯಾಗಿದೆ. ಮುಂಬರುವ ದಿನಗಳಲ್ಲಿ ಸುರಪುರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಬೆಳೆಯಲಿ ಎಂದು ಅಡವಿ ಸಿದ್ಧೇಶ್ವರಮಠದ ಪ್ರಭು ಅಡವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಸುರಾಪುರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದರು.
ಬಿಳಕಿ-ಅವರೊಳ್ಳಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡಿದಾಗ ಮಾತ್ರ ಸಮಾಜದಲ್ಲಿ ಸತ್ಪ್ರಜೆಗಳಾಗಲು ಸಾಧ್ಯವಾಗುತ್ತದೆ ಎಂದರು.
ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಮುಂಬರುವ ದಿನಗಳಲ್ಲಿ ಸುರಾಪುರ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವ ಜತೆಗೆ ಮಂದಿರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜೆಡಿಎಸ್ ಮುಖಂಡ ನಾಸೀರ್ ಬಾಗವಾನ ಮಾತನಾಡಿದರು. ಶಕುಂತಲಾ ಭೋಗಲೆ, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಸೀರ್ ಗಿರಿಯಾಲ, ಪ್ರಕಾಶ ಹೊಸಮನಿ, ನರಸಿಂಹ ಗವೆ, ಅಬ್ದುಲ್ ಗಿರಿಯಾಲ, ಗ್ರಾಪಂ ಮಾಜಿ ಸದಸ್ಯರಾದ ರುದ್ರಪ್ಪ ಬೆಂಡಿಗೇರಿ, ರಾಜು ಲಾವಗಿ, ಪಿಕೆಪಿಎಸ್ ಅಧ್ಯಕ್ಷ ಮಹೇಶ ಪಾಟೀಲ, ಪ್ರಕಾಶ ಅಂಬೋಜಿ, ಉದ್ಯಮಿ ಶಂಕರ ಪ್ಯಾಟಿಗೌಡ್ರ, ಮಹಾದೇವ ಸಾಗರೇಕರ, ಮಂಜುನಾಥ ಅಂಕಲಗಿ, ಸುಭಾನಿ ಶೇಖ್, ಅಖಿಲೇಶ ಸುತಾರ, ದುರ್ಗಾದೇವಿ ದೇವಸ್ಥಾನ ಅಧ್ಯಕ್ಷ ಪ್ರದೀಪ ಗವೆ, ಕಾರ್ಯದರ್ಶಿ ಕಾರ್ತಿಕ ಒಂಟೆ, ಸಚಿನ ಗಸ್ತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net