ಸಮಾಜ ಒಗ್ಗೂಡಿಸುವ ಕಾರ್ಯ ಶ್ಲಾಘನೀಯ

ಮುಧೋಳದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹಾಗೂ ಕನ್ಹೇರಿ ಮಠದ ಅದಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಿದರು. ಹೊಳಬಸು ಬಾಳಕಟ್ಟಿ, ಮಹಾದೇವಪ್ಪ ಅಂಗಡಿ, ಗುರುಲಿಂಗಪ್ಪ ಅಂಗಡಿ, ರಾಜಪ್ಪಣ್ಣ ಕರೆಹೊಣ್ಣ, ಶಂಕರ ತಿಮ್ಮಾಪುರ, ಅರುಣ ಕಾರಜೋಳ ಇತರರಿದ್ದರು.
ಮುಧೋಳದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹಾಗೂ ಕನ್ಹೇರಿ ಮಠದ ಅದಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಿದರು. ಹೊಳಬಸು ಬಾಳಕಟ್ಟಿ, ಮಹಾದೇವಪ್ಪ ಅಂಗಡಿ, ಗುರುಲಿಂಗಪ್ಪ ಅಂಗಡಿ, ರಾಜಪ್ಪಣ್ಣ ಕರೆಹೊಣ್ಣ, ಶಂಕರ ತಿಮ್ಮಾಪುರ, ಅರುಣ ಕಾರಜೋಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿಕೆ
  • ಪ್ರತಿಭಾವಂತರಿಗೆ ಪುರಸ್ಕಾರ-ಸನ್ಮಾನ
ಮುಧೋಳ: ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ಕುಟುಂಬಗಳಿಗೆ ನೆರವಾಗುವ ಮನೋಭಾವ ಬೆಳೆಸಬೇಕು. ಶಿಕ್ಷಣದ ಮೂಲಕ ಸಮಾಜದ ಅಭಿವದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಣಜಿಗ ಸಮಾಜದ ಕ್ಷೇಮಾಭಿವದ್ಧಿ ಸಂಘ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೀರಶೈವ-ಲಿಂಗಾಯತ ಸಮಾಜದ ವಿವಿಧ ಉಪಪಂಗಡಗಳನ್ನು ಒಂದೇ ವೇದಿಕೆಗೆ ತಂದು ಸಂಘಟಿಸುವ ಪ್ರಯತ್ನ ಶ್ಲಾಘನೀಯ. ಪರಸ್ಪರ ಗೌರವ, ವಿಶ್ವಾಸ ಹಾಗೂ ರಕ್ತ ಸಂಬಂಧಗಳ ಮೂಲಕ ಸಮಾಜ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಹೇಳಿದರು.
ತಮ್ಮ ಅಧಿಕಾರಾವಧಿಯಲ್ಲಿ ವೀರಶೈವ-ಲಿಂಗಾಯತ ಸಮುದಾಯಕ್ಕೆ ಶೈಕ್ಷಣಿಕವಾಗಿ 2ಎ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿತ್ತು. ಉದ್ಯೋಗ ಕ್ಷೇತ್ರದಲ್ಲಿಯೂ ಅದರ ಅನುಕೂಲ ಮುಂದುವರಿಯುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ವೀರಶೈವ-ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಿರುವಂತೆ ಕರ್ನಾಟಕದಲ್ಲೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಮಾತನಾಡಿ, ಸಮಾಜದ ಒಗ್ಗಟ್ಟು ರಾಜಕೀಯ ಹಾಗೂ ಸಾಮಾಜಿಕ ಪ್ರಗತಿಗೆ ಅತ್ಯಗತ್ಯ ಎಂದರು.
ಐಎಎಸ್ ಹಾಗೂ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಕನ್ಹೇರಿ ಮಠದ ಅದಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಆರಂಭಿಸುತ್ತಿರುವ ಕೇಂದ್ರಕ್ಕೆ 5 ಲಕ್ಷ ರೂ. ದೇಣಿಗೆ ಘೋಷಿಸಿದರು. ಯುವಕರು ಸಾಂಪ್ರದಾಯಿಕ ಉದ್ಯಮಗಳ ಜೊತೆಗೆ ಹೊಸ ಹಾಗೂ ಲಾಭದಾಯಕ ಉದ್ಯಮಗಳತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಕನ್ಹೇರಿ ಮಠದ ಅದಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಮಾತನಾಡಿ, ಮಕ್ಕಳೇ ಸಮಾಜದ ಅಮೂಲ್ಯ ಆಸ್ತಿ. ಗುಣಮಟ್ಟದ ಶಿಕ್ಷಣ, ಉತ್ತಮ ಸಂಸ್ಕಾರ ಮತ್ತು ಸೂಕ್ತ ಮಾರ್ಗದರ್ಶನದಿಂದ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಪ್ರತಿಭಾವಂತರಿಗೆ ನೀಡುವ ಸನ್ಮಾನ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಶಿರೋಳ ರಾಮರೂಢ ಮಠದ ಶಂಕರಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
2025-26ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅನೀಲ ಜಿಗಜಿನ್ನಿ, ಹರ್ಷವರ್ಧನ ಗುಪ್ತಾ, ಬಸಪ್ಪ ಜಮಖಂಡಿ, ಮಿಲಿಂದ ಕೊಲ್ಹಾರ ಹಾಗೂ ವಿರೂಪಾಕ್ಷಪ್ಪ ಅರಂಗಜಿ ಅವರನ್ನು
ಸನ್ಮಾನಿಸಲಾಯಿತು.
ಬಣಜಿಗ ಸಮಾಜದ ಕ್ಷೇಮಾಭಿವದ್ಧಿ ಸಂಘದ ಬಾಗಲಕೋಟೆ ಜಿಲ್ಲಾಧ್ಯಕ್ಷ ಹೊಳಬಸು ಬಾಳಕಟ್ಟಿ, ಮುಧೋಳ ತಾಲೂಕು ಘಟಕದ ಅಧ್ಯಕ್ಷ ಮಹಾದೇವಪ್ಪ ಅಂಗಡಿ, ವಿಜಯಪುರ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಧೋಳ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ರಾಜಪ್ಪಣ್ಣ ಕರೆಹೊಣ್ಣ, ಕಾಂಗ್ರೆಸ್ ಮುಖಂಡ ಶಂಕರ ತಿಮ್ಮಾಪುರ, ಬಿಜೆಪಿ ಮುಖಂಡ ಅರುಣ ಕಾರಜೋಳ, ವೀರೇಶ ಕಲಾದಗಿ, ಸುಗೂರಪ್ಪ ಅಕ್ಕಿಮರಡಿ, ಡಾ. ರವಿ ನಂದಗಾವಿ, ಸುಭಾಷ ಕೋರಿ, ಸಂಗಮೇಶ ನೀಲಗಂದ, ನಿಂಗಪ್ಪ ಜಂಗಾಲಿ, ಸುರೇಶ ಅಕ್ಕಿಮರಡಿ, ಮಲ್ಲಿಕಾರ್ಜುನ ಬಟಕುರ್ಕು ಸೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net