ವಡಗೇರಾ: ಮಿರುಗ್ಗೆ ಉಡಿ ಕಟ್ಟುಸುತ್ತೀನಿ, ಹಿಂಗಾರಿ ಮುಂಗಾರಿ ತುಕಡಿ, ಎಂಟು ಮೂಲೆ ನಾಲ್ಕು ದಿಕ್ಕು ಸಂಪೂರ್ಣ ಮಳೆ. ಅದರಲ್ಲಿ ಒಂದು ದಿಕ್ಕಿಗೆ ಕಪ್ಪು ಚುಕ್ಕಿ ಇಟ್ಟಿನಿ, ಒಂದು ಪಟ್ಟು ಮಳೆ ಎರಡು ಪಟ್ಟು ಗಾಳಿ, ಒಂದು ಸಮಯದಲ್ಲಿ ದಿಕ್ಕು ನೋಡುವ ಹಾಗೇ ಆಗುತ್ತೆ, ಆದರೂ ಪಾರು ಮಾಡುತ್ತೇನೆ, ಹತ್ತಿ ಹೊಲದಾಗ ಬಂಗಾರ ಲಕ್ ಚೆಲ್ಲಿನಿ, ಮುತ್ತು ನವರತ್ನ ಹೋಗುದಿನಿ, ಸಗರ ಗಡ್ಡಿಗೆ ಹಸೀರು ನಿಶಾನೆ, ಒಕ್ಕಲುಗನ ಮನೆ ಉಕ್ಕಿ ಏರಿತ್ತು, ಕೂಲಿ ಮಾಡುವವ ಕುದುರೆ ಏರಿದ, ಬೆಳೆತಕ್ಕ ಮಳೆ, ಜನಕ್ಕೆ ದನಕ್ಕೆ ಕುತ್ತು ಆದ, ನಂಬಿಕೆ ಇಟ್ಟು ನಡೆದವರಿಗೆ ಹಿಂಬಾಗಿ ಇರುತ್ತಿನಿ ಅಪನಂಬಿಕೆ ಮಾಡಿದವರು ತಮ್ಮ ಫಲಬೋಗ ತಾವೇ ಉಣ್ಣುತ್ತಾರೆ. ಇದು ಹಜರತ್ ಸೈಯದ್ ಭಾಷಾ ದರ್ಗಾದಲ್ಲಿ ಕಂಡು ಬಂದ ಹೇಳಿಕೆ.