ಮಕ್ಕಳ ಸಂಖ್ಯೆಯಲ್ಲಿ ಇಳಿಮುಖ: ಪ್ರತಿ ಕೇಂದ್ರದಲ್ಲಿ ಕನಿಷ್ಠ 8 ರಿಂದ 25 ಮಕ್ಕಳು ಇರಬೇಕೆಂಬ ನಿಯಮವಿದೆ. ಆದರೆ, ನರೇಗಾ ಕಾಮಗಾರಿಗಳು ಕಡಿಮೆಯಾದಂತೆ ಮಕ್ಕಳ ಸಂಖ್ಯೆಯೂ ಣಿಸಿದೆ. ಅರೆಬೊಮ್ಮನಹಳ್ಳಿ ಗ್ರಾಪಂನ ಕೊಡಿಗೆಬೊಮ್ಮನಹಳ್ಳಿಯ ಕೂಸಿನ ಮನೆಯಲ್ಲಿ 4 ಮಕ್ಕಳಿದ್ದು, ಇಬ್ಬರು ಕೇರ್ ಟೇಕರ್ಸ್ ಇದ್ದಾರೆ. ಕೊಡಿಗೇಹಳ್ಳಿ ಗ್ರಾಪಂನ ಓಬಳಾಪುರ ಗ್ರಾಮದ ಕೂಸಿನ ಮನೆಯಲ್ಲಿ 3 ಮಕ್ಕಳಿದ್ದು, ಒಬ್ಬರು ಕೇರ್ ಟೇಕರ್ ಇದ್ದಾರೆ. ಹಸಿರುವಳ್ಳಿ ಗ್ರಾಪಂನ ಭೈರನಾಯಕನಹಳ್ಳಿ ಕೂಸಿನ ಮನೆಯಲ್ಲಿ 5 ಮಕ್ಕಳಿದ್ದು, ಒಬ್ಬರು ಕೇರ್ ಟೇಕರ್ ಇದ್ದಾರೆ.