ಚಿಕ್ಕಲಪರ್ವಿ ಸದಾಶಿವಾನಂದ ಸ್ವಾಮೀಜಿ, ಸುಣಧೋಳಿ ಶಿವಾನಂದ ಸ್ವಾಮೀಜಿ ಹಾಗೂ ತಾರಿಹಾಳ ಅಡಿವೇಶ್ವರ ದೇವರು ಆಶೀರ್ವಚನ ನೀಡಿದರು. ಪ್ರಭುನೀಲಕಂಠ ಶ್ರೀಗಳಿಗೆ ಭಕ್ತರು ತುಲಾಭಾರ ಸೇವೆ ಸಲ್ಲಿಸಿದರು. ಚಲನಚಿತ್ರ ಹಿನ್ನೆಲೆ ಗಾಯಕ ರಾಜೇಶ ಕೃಷ್ಣನ್ ತಂಡ ಸಂಗೀತ ಕಾರ್ಯಕ್ರಮ ನೀಡಿತು. ಸ್ಥಳಿಯ ಗುರು ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ವಿಶ್ವನಾಥ ಹಿರೇಮಠ, ಶಿವಾನಂದ ಬೆಳಗಾವಿ, ರಾಜು ಜನ್ಮಟ್ಟಿ, ಮಹೇಶ ಕೋಟಗಿ, ನಾನಾಸಾಹೇಬ ಪಾಟೀಲ, ಸುಭಾಸ ತುರಮರಿ, ಬಸವರಾಜ ದೊಡ್ಡಮನಿ, ಮಲ್ಲಯ್ಯ ಶೀಲಯ್ಯನವರಮಠ, ಸದಾಶಿವ ಕೋರಿಮಠ ಇತರರಿದ್ದರು.