ದೂರದೃಷ್ಟಿಯ ಅರಸ ಕೆಂಪೇಗೌಡ Kempegowda

ದೂರದೃಷ್ಟಿಯ ಅರಸ ಕೆಂಪೇಗೌಡ Kempegowda
ದೂರದೃಷ್ಟಿಯ ಅರಸ ಕೆಂಪೇಗೌಡ Kempegowda
Published on
ಕದರೀಪುರ: ನಾಡಪ್ರಭು ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದಡಿ ಯಲಹಂಕ ನಾಡನ್ನು ಆಳಿದ ಪ್ರಸಿದ್ಧ ಪಾಳೇಗಾರರು. ಆಧುನಿಕ ಬೆಂಗಳೂರು ನಗರಕ್ಕೆ ಅಡಿಗಲ್ಲು ಇಟ್ಟ ಅರಸನ ದೂರದೃಷ್ಟಿ, ಅತ್ಯುತ್ತಮ ನಗರಾಭಿವೃದ್ಧಿ ಮತ್ತು ಪ್ರಜಾಹಿತ ಚಿಂತನೆಗೆ ಹೆಸರಾದವರು ಎಂದು ಸಮಾಜಸೇವಕ ವೆಂಕಟರೆಡ್ಡಿ ಹೇಳಿದರು.Kempegowda
ಕೋಲಾರ ತಾಲೂಕು ವೇಮಗಲ್​ ಹೋಬಳಿ ಅಮ್ಮನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಚಹಳ್ಳಿಯಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಮಾತನಾಡಿ, ಕೆಂಪೇಗೌಡರು ಬೆಂಗಳೂರು ನಗರದ ನಿರ್ಮಾಣಕ್ಕಾಗಿ ,ವಿಜಯನಗರ ಸಾಮ್ರಾಜ್ಯದ ಅಚ್ಯುತರಾಯನ ಅನುಮತಿ ಪಡೆದು, 1537 ರಲ್ಲಿ ಕೆಂಪೇಗೌಡರು ಮಣ್ಣಿನ ಕೋಟೆ ಮತ್ತು ಸುಂದರವಾದ ಬೆಂಗಳೂರು ನಗರ ನಿರ್ಮಿಸಿದರು. ವ್ಯಾಪಾರ ಮತ್ತು ವಸತಿಗಾಗಿ ಪ್ರತ್ಯೇಕ ಪ್ರದೇಶಗಳಾಗಿ ಅರಳಿಪೇಟೆ, ಬಳೆಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಕಾಟನ್​ ಪೇಟೆ ಈ ಮಾದರಿಯಲ್ಲಿ ಗುರುತಿಸಿ ವಿಂಗಡಿಸಿ, ಗ್ರೀಡ್​ ಪದ್ಧತಿಯಲ್ಲಿ ರಸ್ತೆ ವಿನ್ಯಾಸಗೊಳಿಸಿದ್ದರು. ಕುಡಿಯುವ ನೀರಿನ ಅಭಾವ ನೀಗಿಸಲು ಮತ್ತು ಕೃಷಿಗಾಗಿ ಕೆಂಪಾಂಬುಧಿ ಕೆರೆ, ಹಲಸೂರು ಕೆರೆ ಮುಂತಾದ ಹಲವು ಕೆರೆಗಳನ್ನು ನಿರ್ಮಿಸಿದರು. ಇಂತಹ ರೈತರ ಪರವಾಗಿ ಆಲೋಚನೆವುಳ್ಳ ಮಹಾನ್​ ವ್ಯಕ್ತಿ ಕೆಂಪೇಗೌಡರಿಗೆ ಗೌರವ ಸೂಚಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಕೆಂಪೇಗೌಡರ ಪ್ರತಿಮೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಯುವಕರು ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿಜೇತರಾದ ಹೆಣ್ಣು ಮಕ್ಕಳಿಗೆ ಹಿರಿಯ ಮುಖಂಡ ಬಿ.ಶಿವರಾಜ್​ ಉಡುಗೊರೆ ನೀಡಿ ಪ್ರಶಂಶಿಸಿದರು .
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net