ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಚಿವ ಈಶ್ವರ ಖಂಡ್ರೆ ಅವಿರೋಧ ಆಯ್ಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ನೂತನ ಅಧ್ಯಕ್ಷರಾಗಿ ಸಚಿವ ಈಶ್ವರ ಖಂಡ್ರೆ ಆಯ್ಕೆಯಾಗಿದ್ದಾರೆ. ರಾಜ್ಯಾಧ್ಯಕ್ಷ ಶಂಕರ ಬಿದರಿ, ಉಪಾಧ್ಯಕ್ಷ ವೀರಣ್ಣ ಚರಂತಿಮಠ, ಪ್ರಭಾಕರ ಕೋರೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ನೂತನ ಅಧ್ಯಕ್ಷರಾಗಿ ಸಚಿವ ಈಶ್ವರ ಖಂಡ್ರೆ ಆಯ್ಕೆಯಾಗಿದ್ದಾರೆ. ರಾಜ್ಯಾಧ್ಯಕ್ಷ ಶಂಕರ ಬಿದರಿ, ಉಪಾಧ್ಯಕ್ಷ ವೀರಣ್ಣ ಚರಂತಿಮಠ, ಪ್ರಭಾಕರ ಕೋರೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರ ಅವಿರೋಧ ಆಯ್ಕೆ
  • ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆಗೆ ಅವಕಾಶ
  • 122 ವರ್ಷದ ರಾಷ್ಟ್ರೀಯ ಸಂಸ್ಥೆಗೆ 24ನೇ ಅಧ್ಯಕ್ಷರಾಗಿ ನೇಮಕ

ಬೆಂಗಳೂರು:122 ವರ್ಷದ ಸುದೀರ್ಘಇತಿಹಾಸವಿರುವ ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭೆಯ ರಾಷ್ಟ್ರೀಯಅಧ್ಯಕ್ಷರಾಗಿ ಅರಣ್ಯ,ಜೀವಿಶಾಸ ಮತ್ತುಅರಣ್ಯ ಸಚಿವ ಈಶ್ವರ ಖಂಡ್ರೆಆಯ್ಕೆಯಾಗಿದ್ದಾರೆ.

ಇತ್ತೀಚೆಗೆಶಾಮನೂರು ಶಿವಶಂಕರಪ್ಪ ಅವರಿಂದತೆರವಾಗಿದ್ದ ಸ್ಥಾನಕ್ಕೆ ಮಂಗಳವಾರನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿಅವಿರೋಧವಾಗಿ ಈಶ್ವರ ಖಂಡ್ರೆಯವರನ್ನುಆಯ್ಕೆ ಮಾಡಲಾಯಿತು.

ನಂತರನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಈಶ್ವರ ಖಂಡ್ರೆ,12ನೇ ಶತಮಾನಕ್ಕೂಮುನ್ನ ರೇಣುಕಾದಿ ಪಂಚಾಚಾರ್ಯರು, ನಂತರ ಬಸವಾದಿಪ್ರಮಥರು ಹಾಗೂ ಎಲ್ಲ ವೀರಶೈವಲಿಂಗಾಯತ ಮಠಾಧಿಪತಿಗಳು ಸಮಾಜಕ್ಕೆಮಾರ್ಗದರ್ಶನ ಮಾಡಿದ್ದಾರೆ.ಮಾನವ ಧರ್ಮಕ್ಕೆಜಯವಾಗಲೀ,ಧರ್ಮದಿಂದಲೇವಿಶ್ವಕ್ಕೆ ಶಾಂತಿ ಎಂದು ಸಾರಿದನಮ್ಮ ಹಿರಿಯರು ಸಕಲ ಜೀವಾತ್ಮರಿಗೆಲೇಸನ್ನೇ ಬಯಸಿದವರು.ಕೇವಲ ವೀರಶೈವಲಿಂಗಾಯತ ಸಮುದಾಯದವರಿಗೆಮಾತ್ರವಲ್ಲದೆ,ಎಲ್ಲ ಜಾತಿ,ಧರ್ಮ,ಮತ,ಪಂಥ,ಭಾಷಿಕರಿಗೆಸಮಾನವಾಗಿ ಅನ್ನ,ಆಶ್ರಯ,ಶಿಕ್ಷಣ ನೀಡಿನವ ಕರ್ನಾಟಕ ಮತ್ತು ನವಭಾರತನಿರ್ಮಾಣಕ್ಕೆ ನೀಡಿರುವ ಕೊಡುಗೆಅಪಾರ ಎಂದರು.

1904ರಲ್ಲಿಹಾನಗಲ್ ಕುಮಾರ ಮಹಾಸ್ವಾಮಿಗಳುಒಗ್ಗಟ್ಟಿನಲ್ಲಿ ಬಲವಿದೆ,ವಿಘಟನೆಯಲ್ಲಿದೌರ್ಬಲ್ಯವಿದೆ ಎಂಬುದನ್ನು ಸಾರಿನಮ್ಮ ಸಮಾಜವನ್ನು ಒಗ್ಗೂಡಿಸಲುಸ್ಥಾಪಿಸಿದ ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭಾದ ಹಿಂದಿನ ಎಲ್ಲಅಧ್ಯಕ್ಷರುಗಳು ಈ ಸಭಾ ಕಟ್ಟಿಬೆಳೆಸಿದ್ದಾರೆ.ನಮ್ಮ ತಂದೆಲಿಂಗೈಕ್ಯ ಡಾ.ಭೀಮಣ್ಣ ಖಂಡ್ರೆರಾಷ್ಟ್ರೀಯ ಅಧ್ಯಕ್ಷರಾಗಿಮಹಾಸಭಾಕ್ಕೆ ಸ್ವಂತ ಕಟ್ಟಡವನ್ನುನಿರ್ಮಿಸಿದ್ದಾರೆ.ಹಿಂದಿನ ಅಧ್ಯಕ್ಷರಾದಶಾಮನೂರು ಶಿವಶಂಕರಪ್ಪನವರುಬೆಂಗಳೂರಿನಲ್ಲಿ 1ಸಾವಿರವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ಮತ್ತು ಎಲ್ಲ ಜಿಲ್ಲೆ ಮತ್ತುತಾಲೂಕಿನಲ್ಲಿ ವೀರಶೈವ ಲಿಂಗಾಯತಭವನ ಮತ್ತು ಹಾಸ್ಟೆಲ್ ನಿರ್ಮಿಸುವಕನಸು ಕಂಡಿದ್ದರು.ಕೆಲವು ಕಡೆ ಇದುಸಾಕಾರಗೊಂಡಿದ್ದು,ಉಳಿದ ಕಡೆಯೂಅದನ್ನು ಮುಂದುವರೆಸುವುದರ ಜೊತೆಗೆಮಹತ್ವಾಕಾಂಕ್ಷಿಯ ಬೆಂಗಳೂರುವಿದ್ಯಾರ್ಥಿನಿಯರ ಹಾಸ್ಟೆಲ್ನಿರ್ಮಾಣಕ್ಕೆ ಶೀಘ್ರದಲ್ಲೇಚಾಲನೆ ನೀಡಲಾಗುವುದು ಎಂದು ಖಂಡ್ರೆಭರವಸೆ ನೀಡಿದರು.

ಮಹಾಸಭೆಯ ಧ್ಯೇಯೋದ್ದೇಶ

* ಸಮಾಜದಲ್ಲಿ ಹಿಂದುಳಿದಿರುವ ಶೇ.30ರಷ್ಟು ಜನರಿದ್ದು ಅವರಿಗೆ ನ್ಯಾಯ ಕೊಡಿಸುವ ಕಾರ್ಯ

* ಯುವಜನರಲ್ಲಿ ಜಾಗೃತಿ ಮೂಡಿಸಿ, ದುಶ್ಚಟಗಳಿಂದ ಮುಕ್ತಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಕಾರ್ಯಕ್ರಮ

* ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಒಗ್ಗೂಡಿಸಲು ಪ್ರಾಮಾಣಿಕ ಪ್ರಯತ್ನ

*ವೀರಶೈವ ಲಿಂಗಾಯತ ಎರಡೂ ಒಂದೇ ಆಗಿದ್ದು, ಕೆಲವರು ಸ್ವಾರ್ಥಕ್ಕಾಗಿ ಗೊಂದಲ ಮೂಡಿಸುತ್ತಿರುವುದರ ಬಗ್ಗೆ ಜಾಗೃತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net