ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಅನನ್ಯ

ಗಲಗಲಿ ಬಸವೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ ಕಾಯಕ್ರಮ ಆಚರಿಸಲಾಯಿತು. ನಿಂಗಣ್ಣ ಗೋಳಿಪಲ್ಲೆ, ಸುನೀಲಗೌಡ ನ್ಯಾಮಗೌಡ, ಎಚ್.ವೈ. ಜರಾಳಿ, ಹಿರಿಯ ಸಾಹಿತಿ ಅಶೋಕ ಚಿಚಖಂಡಿ ಇತರರಿದ್ದರು.
ಗಲಗಲಿ ಬಸವೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ ಕಾಯಕ್ರಮ ಆಚರಿಸಲಾಯಿತು. ನಿಂಗಣ್ಣ ಗೋಳಿಪಲ್ಲೆ, ಸುನೀಲಗೌಡ ನ್ಯಾಮಗೌಡ, ಎಚ್.ವೈ. ಜರಾಳಿ, ಹಿರಿಯ ಸಾಹಿತಿ ಅಶೋಕ ಚಿಚಖಂಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಂಗಣ್ಣ ಗೋಳಿಪಲ್ಲೆ ಅಭಿಮತ
  • ಶೈಕ್ಷಣಿಕ, ಕೈಗಾರಿಕಾ ಹರಿಕಾರ
ಗಲಗಲಿ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡುವುದರೊಂದಿಗೆ ನಾಡು ನುಡಿಗಾಗಿ ವಿಶೇಷವಾಗಿ ಸೇವೆ ಸಲ್ಲಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಸೇವೆ ಅಗಾಧವಾದದ್ದು ಎಂದು ಬಸವೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಿಂಗಣ್ಣ ಗೋಳಿಪಲ್ಲೆ ಹೇಳಿದರು.
ಸ್ಥಳೀಯ ಸಂಸ್ಥೆ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬಾಗಲಕೋಟೆ ಜಿಲ್ಲಾ ಘಟಕ, ಕಸಾಪ ಗಲಗಲಿ ವಲಯ ಘಟಕ ಮತ್ತು ಬಸವೇಶ್ವರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ 142ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಅಧುನಿಕ ಮೈಸೂರಿನ ಶಿಲ್ಪಿ, ಶೈಕ್ಷಣಿಕ ಹಾಗೂ ಕೈಗಾರಿಕಾ ಹರಿಕಾರ ಜನ ಸಾಮಾನ್ಯರ ಪ್ರೀತಿಗೆ ಪಾತ್ರರಾಗುವಂತೆ ಆಡಳಿತ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ ಜನಮುಖಿ ಸೇವೆ ಅಪಾರವಾದದು ಎಂದರು.
ಗಾಲವ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸುನೀಲಗೌಡ ನ್ಯಾಮಗೌಡ, ಬಾಲವಿಕಾಸ ಅಕಾಡೆಮಿ ಸದಸ್ಯ ಎಚ್.ವೈ. ಜರಾಳಿ, ಹಿರಿಯ ಸಾಹಿತಿ ಅಶೋಕ ಚಿಚಖಂಡಿ ಮಾತನಾಡಿದರು.
ಶಿವಲೀಲಾ ಮಂಟೂರ, ಸುಮಿತ್ರಾ ಗೋಳಿಪಲ್ಲೆ ತಂಡದವರು ನಾಡಗೀತೆ ಹಾಡಿದರು. ಕಸಾಪ ವಲಯಘಟಕದ ಅಧ್ಯಕ್ಷ ಮುರಗಯ್ಯ ಕಾಶಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆ.ಎಚ್. ಬಾಚಕ, ಕಾಮಣ್ಣ ಗೋಕಾವಿ, ಶಿವಬಸು ಮಲ್ಲನ್ನವರ, ಲಿಯಾಕತ್ ಬಾಗವಾನ, ಅರುಣ ಥೋರತ, ಮಲ್ಲಪ್ಪ ಕುಟಕನಕೇರಿ ಇತರರಿದ್ದರು. ಸಂಗು ಗಿರಿಸಾಗರ ನಿರೂಪಿಸಿದರು, ಶಂಕರಗೌಡ ಗುತ್ತಿಗೌಡರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net