ಚೆನ್ನಯ್ಯನಪಾಳ್ಯದ ಸೋಮಶೇಖರ್ (22) ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ ಎನ್ನಲಾಗಿದೆ. ಆದರೆ, ಇತ್ತೀಚೆಗೆ ಆತ ದುಶ್ಚಗಳಿಗೆ ದಾಸನಾಗಿದ್ದರಿಂದ ಪ್ರೇಯಸಿ ದೂರವಾಗಿದ್ದಳು. ಇದರಿಂದ ಆವೇಶಕ್ಕೆ ಒಳಗಾಗಿದ್ದ ಸೋಮಶೇಖರ್ ಹೈಟೆನ್ಷನ್ ಕಂಬ ಏರಿ, ಪ್ರೇಯಸಿ ಬರುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಹಠ ಹಿಡಿದಿದ್ದ. ಕೊನೆಗೆ ಆ ಹುಡುಗಿಯನ್ನು ಸ್ಥಳಕ್ಕೆ ಕರೆಸಿ ಮನವೊಲಿಸಿ ಸುರಕ್ಷಿತವಾಗಿ ಆತನನ್ನು ಕೆಳಗೆ ಇಳಿಸಿದ ಅಗ್ನಿಶಾಮಕ ಸಿಬ್ಬಂದಿ, ಬಳಿಕ ಆತನನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.