ಮುಳಬಾಗಿಲು: ಕನ್ನಡ ಸಾಹಿತ್ಯ ಪರಿಷತ್ತಿಗೆ 112 ವರ್ಷ ತುಂಬಿರುವುದು ಹೆಮ್ಮೆಯ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಮುರಳಿ ಕೃಷ್ಣ ಹೇಳಿದರು. newspapers
ನಗರದ ಭಾರತೀಯ ಕಿಸಾನ್ ಸಂಘ ಕಾರ್ಯಾಲಯದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದಿಂದ ಹಮ್ಮಿಕೊಂಡಿದ್ದ ಸಂಸ್ಥಾಪನ ದಿನಾಚರಣೆಯಲ್ಲಿ ಕೆಯುಡಬ್ಲುಜೆ ಪ್ರಶಸ್ತಿ ಪಡೆದಮುಳಬಾಗಿಲು ವಿಜಯವಾಣಿ ವರದಿಗಾರ ಎ.ಅಪ್ಪಾಜಿಗೌಡ ಅವರನ್ನು ಸನ್ಮಾನಿಸಿ ಮಾತನಾಡಿ, ತಾಲೂಕಿನಲ್ಲಿ ಕನ್ನಡ ಪತ್ರಿಕೆ ಓದುವವರ ಸಂಖ್ಯೆಗಣನೀಯ ಹೆಚ್ಚಿಸುವ ಮೂಲಕ ಭಾಷೆ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಕಸಾಪ ಜಿಲ್ಲಾ ಗಡಿನಾಡು ಪ್ರತಿನಿಧಿ ತಾಯಲೂರು ಗೋಪಿನಾಥ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರೋತ್ಸಾಹ, ಸರ್.ಎಂ.ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಸಂಸ್ಥೆ ಸ್ಥಾಪನೆ ಮಾಡಲಾಯಿತು. ಗಡಿಭಾಗದಲ್ಲಿ ಇತ್ತೀಚಿಗೆ ಕನ್ನಡ ಕಾರ್ಯಕ್ರಮಗಳು ಕಡಿಮೆಯಾಗುತ್ತಿವೆ. ಆದರೂ ಕನ್ನಡ ಪತ್ರಿಕೆಗಳು ಈ ಭಾಗದ ಅಭಿವೃದ್ಧಿಗಳ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಬಿಕೆಎಸ್ ಜಿಲ್ಲಾ ಕೋಶಾಧ್ಯಕ್ಷ ವಕೀಲ ವಿ.ಜಯಪ್ಪ ಮಾತನಾಡಿ, ಮೈಸೂರಿನ ರಾಜ ಮಹಾರಾಜರು ನಾಡು&ನುಡಿಗೆ ಅಪಾರಸೇವೆ ಸಲ್ಲಿಸಿದ್ದಾರೆ. ಅದೇ ರೀತಿ ನಾಡಪ್ರಭು ಕೆಂಪೇಗೌಡರು ತಮ್ಮ ದೂರದೃಷ್ಟಿ ಮೂಲಕ ಬೆಂಗಳೂರನ್ನು ಕಟ್ಟಿ ಬೆಳೆಸಿದ್ದಾರೆ. ಇಂತಹ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಕಾರಣಾಂತರಗಳಿಂದ ಹಿನ್ನಡೆ ಉಂಟಾಗಿದೆ. ಇದನ್ನು ಸರ್ಕಾರ ಬಗೆಹರಿಸಿ ಶೀಘ್ರ ಲೋಕಾರ್ಪಣೆಗೊಳಸಬೇಕು ಎಂದು ಹೇಳಿದರು.
ಚಂದ್ರಶೇಖರ್, ಕರವೇ ಅಧ್ಯಕ್ಷ ಹರೀಶ್ಗೌಡ, ವಕೀಲ ನಲ್ಲಾಂಡಹಳ್ಳಿ ರಮೇಶ್, ಭೋವಿ ಸಂಘದ ತಾಲೂಕು ಅಧ್ಯಕ್ಷ ಜಿ.ಶಂಕರಪ್ಪ, ಮುಖಂಡರಾದ ನಂಗಲಿ ಕೆ.ಸತೀಶ್ಕುಮಾರ್, ಗ್ಯಾಸ್ ರಘು ಇದ್ದರು.