ದೊಡ್ಡಬಳ್ಳಾಪುರದಲ್ಲಿ ನೇಕಾರರ ಹೋರಾಟ ಸಮಿತಿಯ ರಜತಮಹೋತ್ಸವದಲ್ಲಿ ನೇಕಾರ ಮುಖಂಡರನ್ನು ಸನ್ಮಾನಿಸಲಾಯಿತು. ನೇಕಾರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜೆ.ಹೇಮಂತ್ ರಾಜು, ಯಲಹಂಕ ನೇಕಾರ ಮುಖಂಡರಾದ ಪದ್ಮಾವತಿ, ಅಮರನಾಥ್, ನಗರಸಭೆ ಸದಸ್ಯ ಎಚ್.ಎಸ್.ಶಿವಶಂಕರ್, ನೇಕಾರ ಹೋರಾಟಗಾರ ಗೊಟ್ಟಗೆರೆ ಸುರೇಶ್, ನಗರಸಭೆ ನಾಮನಿರ್ದೇಶಿತ ಸದಸ್ಯ ಅಖಿಲೇಶ್, ಮುಖಂಡರಾದ ಪಿ.ಎ.ವೆಂಕಟೇಶ್, ಡಿ.ವಿ.ಜಗದೀಶ್ ಇದ್ದರು.
ದೊಡ್ಡಬಳ್ಳಾಪುರ : ನೇಕಾರರ ಹೋರಾಟ ಸಮಿತಿಯು ನೇಕಾರರ ಧ್ವನಿಯಾಗಿ ವರ್ಷಗಳಿಂದ ಸುದೀರ್ಘ ಹೋರಾಟ ಮಾಡಿಕೊಂಡು ಬರುತ್ತಿದೆ. ನೇಕಾರರಿಗೆ ರಾಜ್ಯವು 25 ಎಚ್ಪಿಯವರೆಗೂ ಉಚಿತ ವಿದ್ಯುತ್ ನೀಡುತ್ತಿದೆ. ಸರ್ಕಾರದ ಯೋಜನೆ ಪಡೆಯಲು ಹೋರಾಟ ಮುಖ್ಯವಾಗುತ್ತದೆ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ನಗರದ ಎಡಿಎಸ್ ಭವನದ ಸಭಾಂಗಣದಲ್ಲಿ ನೇಕಾರರ ಹೋರಾಟ ಸಮಿತಿಯ ರಜತಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ನೇಕಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಂಸತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಧಾನಿ ಸ್ಪರ್ಧಿಸುವ ಕ್ಷೇತ್ರದಿಂದ ದೊಡ್ಡಬಳ್ಳಾಪುರಕ್ಕೆ ಬಂದು ನೇಕಾರಿಕೆಯಲ್ಲಿ ಅನೇಕರು ತೊಡಗಿಸಿಕೊಂಡಿದ್ದಾರೆ. ಇದರಿಂದ ಎಲ್ಲ ಉದ್ಯಮಗಳು ಸಂಕಷ್ಟದಲ್ಲಿದ್ದು, ನೇಕಾರರ ಜತೆ ಸದಾ ಇರುತ್ತೇನೆ ಎಂದರು.
ನೇಯ್ಗೆ ಉದ್ಯಮ ಏರಿಳಿತ ಕಾಣುತ್ತಲೇ ಇರುತ್ತದೆ. ಸದ್ಯ ದೊಡ್ಡ ಪ್ರಮಾಣದಲ್ಲಿ ನೇಯ್ಗೆ ಉದ್ಯಮಕ್ಕೆ ಬಿಕ್ಕಟ್ಟು ಬಂದಿದೆ. ಸಣ್ಣ ಪ್ರಮಾಣದ ಕೈಗಾರಿಕೆಗಳು ಬಿಕ್ಕಟ್ಟಿನಲ್ಲಿ ಸಿಲುಕಿದೆ. ಉದ್ಯಮ ಉಳಿವಿಗಾಗಿ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಉಳಿಸಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು.