ನಾಗಲಾಪುರ ವೀರಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾತಿ-ಮತಗಳ ಬೇಧವಿಲ್ಲದ ಸಮ ಸಮಾಜದ ಕನಸು ಕಂಡವರು. ಕೇವಲ ಪುತ್ಥಳಿ ಸ್ಥಾಪನೆಗೆ ಸೀಮಿತವಾಗದೆ, ಅವರ ವಚನಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.