437 ಕಿಮೀ ದೂರವನ್ನು ಒಳಗೊಂಡಿರುವ ಈ ನಾಲ್ಕು ಹಂತಗಳ ರೋಡ್ ರೇಸ್ ಮಹಾರಾಷ್ಟ್ರ ಸರ್ಕಾರದ ಬೆಂಬಲದೊಂದಿಗೆ ನಡೆಯಲಿದೆ. ಈ ಕುರಿತು ಮಾತನಾಡಿದ ಪುಣೆ ಗ್ರ್ಯಾಂಡ್ ಟೂರ್ ಇನ್-ಚಾರ್ಜ್ ಅಧಿಕಾರಿ ಶ್ರೀ ಜಿತೇಂದ್ರ ದುಡಿ “ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ನೆದರ್‌ಲ್ಯಾಂಡ್, ಆಸ್ಟ್ರೇಲಿಯಾ, ಚೀನಾ, ಮಲೇಶಿಯಾ, ಇಂಡೋನೇಷಿಯಾ, ಥೈಲ್ಯಾಂಡ್ ಮುಂತಾದ ಪ್ರಮುಖ ಸೈಕ್ಲಿಂಗ್ ರಾಷ್ಟ್ರಗಳ ತಂಡಗಳು ಈ ರೇಸ್‌ನಲ್ಲಿ ಪಾಲ್ಗೊಳ್ಳಲು ಬಲವಾದ ಆಸಕ್ತಿ ತೋರಿವೆ. ಭಾರತದಲ್ಲಿ ಸೈಕ್ಲಿಂಗ್ ಕ್ರೀಡೆಯ ಬೆಳವಣಿಗೆಗೆ ಯೂನಿಯನ್ ಸೈಕ್ಲಿಸ್ಟ್ ಇಂಟರ್ನ್ಯಾಷನಲ್ (UCI) ವಿಶೇಷವಾಗಿ ಉತ್ತೇಜನ ನೀಡುತ್ತಿದೆ ಎಂದರು.