

ದಾಖಲೆಗಳಿಲ್ಲದ ಕಾಲ್ಪನಿಕ ನಿವೇಶನ
ಅರ್ಜಿದಾರರು 1989ರಲ್ಲಿ ಗೆದ್ದಲಹಳ್ಳಿಯಲ್ಲಿ ವಸತಿ ನಿವೇಶನ ಖರೀದಿಸಿದ್ದರು. ಬಿಡಿಎ ಅಧಿಕಾರಿಗಳು ಅವರ ನಿವೇಶನದ ಮೇಲೆ "ಸೈಟ್ ನಂ. 253ಎ' ಎಂದು ಹೊಸ ನಿವೇಶನವನ್ನು ಸೃಷ್ಟಿಸಿದ್ದರು. 2010ರ ಜೂ. 7ರಂದು ಪಲ್ಲವಿ ಅವರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಆದರೆ, ಬಿಡಿಎ ಕಮಿಷನರ್ ಲೇಔಟ್ ಪ್ಲಾನ್ನಲ್ಲಿ "ಸೈಟ್ ನಂ. 253ಎ' ಅನ್ನು ಅಧಿಕೃತವಾಗಿ ರಚಿಸಲು ಅ. 12ರಂದು ಸಹಿ ಹಾಕಿದ್ದರು. ಅಂದರೆ, ಲೇಔಟ್ ನಕಾಶೆಯಲ್ಲೇ ಇಲ್ಲದ ನಿವೇಶನವನ್ನು ಮಂಜೂರು ಮಾಡಿ ನಂತರ ಹಂಚಿಕೆ ಮಾಡಲಾಗಿದೆ. ಇದು ರಾಜಕೀಯ ಪ್ರಭಾವದಿಂದ ಅಧಿಕಾರಿಗಳು ಸೃಷ್ಟಿಸಿದ ದಾಖಲೆಗಳಿಲ್ಲದ ಕಾಲ್ಪನಿಕ ನಿವೇಶನ ಎಂದು ಹೈಕೋರ್ಟ್ ಪರಿಗಣಿಸಿದೆ.