ರೇಷ್ಮೆ ಇಲಾಖೆ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ silk-department

ರೇಷ್ಮೆ ಇಲಾಖೆ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ silk-department
ರೇಷ್ಮೆ ಇಲಾಖೆ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ silk-department
Published on

ಪ್ರಮುಖ ಮುಖ್ಯಾಂಶಗಳು

  • ನಿರ್ಮಾಣಗೊಂಡು 6 ತಿಂಗಳಾದರೂ ತೆರೆಯದ ಬಾಗಿಲು ರೈತರಿಗಿಲ್ಲ ಬಳಕೆಯ ಸೌಭಾಗ್ಯ
ಶ್ರೀನಿವಾಸಪುರ: ರೇಷ್ಮೆ ಇಲಾಖೆಯ ಕಟ್ಟಡ ನಿರ್ಮಾಣಗೊಂಡು 6 ತಿಂಗಳಾದರೂ ಗುತ್ತಿಗೆದಾರರು ಹಾಗೂ ಸರ್ಕಾರದ ನಡುವಿನ ಸಮಸ್ಯೆಯಿಂದ ಲೋಕಾರ್ಪಣೆಯಾಗದೆ ನನೆಗುದಿದೆ ಬಿದ್ದಿದೆ. silk-department
ಪಟ್ಟಣದ ರೇಷ್ಮೆಗೂಡು ವಾರುಕಟ್ಟೆ ಆವರಣದಲ್ಲಿ ಸುವಾರು 81 ಲಕ್ಷ ರೂ. ವೆಚ್ಚದಲ್ಲಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ಕ್ಷೇತ್ರದ ರೈತರ ಅನುಕೂಲಕ್ಕಾಗಿ, ಮೂಲ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡ ನಿರ್ವಾಣ ವಾಡಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದಿದ್ದರು. ಆದರೆ, ಕಾಮಗಾರಿ ಮುಗಿದು 6 ತಿಂಗಳು ಕಳೆದರೂ ರೈತರಿಗೆ ಕಟ್ಟಡದ ಉಪಯೋಗದ ಭಾಗ್ಯ ಸಿಗುತ್ತಿಲ್ಲ.
ಸರ್ಕಾರ, ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾಮಗಾರಿಗೆ ಹಣ ಮಂಜೂರು ವಾಡಿದ್ದು, ಅಧಿಕಾರಿಗಳು ಗುತ್ತಿಗೆದಾರರಿಗೆ ನೀಡಬೇಕಿದ್ದ ಹಣ ಬಾಕಿ ಉಳಿಸಿರುವುದರಿಂದ ಗುತ್ತಿಗೆದಾರರು ಇಲಾಖೆಗೆ ಕಟ್ಟಡ ಹಸ್ತಾಂತರ ವಾಡಲಿಲ್ಲ. ಈಗಿರುವ ರೇಷ್ಮೆಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಖಾಸಗಿ ಕಟ್ಟಡವೊಂದರ 2ನೇ ಅಂತಸ್ತಿನಲ್ಲಿದ್ದು, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಅನಾನುಕೂಲವಾಗುತ್ತಿದೆ. ಅವ್ಯವಸ್ಥೆಯಿಂದ ಬೇಸತ್ತ ಸಾರ್ವಜನಿಕರು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ನೂತನ ಕಟ್ಟಡ ಕಾಮಗಾರಿಯು ಅಲ್ಪಸ್ವಲ್ಪ ಬಾಕಿ ಇದ್ದು, ಗುತ್ತಿಗೆದಾರರಿಗೆ ಒಂದಿಷ್ಟು ಅನುದಾನ ಬಾಕಿ ಇರುವುದರ ಇಲಾಖೆಗೆ ನೂತನ ಕಟ್ಟಡ ಒಪ್ಪಿಸಿರುವುದಿಲ್ಲ ಎನ್ನುವ ಬಗ್ಗೆ ವಾಹಿತಿ ಲಭಿಸಿದೆ. ಗುತ್ತಿಗೆದಾರರೊಂದಿಗೆ ಚರ್ಚಿಸಿ, ಶ್ರೀ ನೂತನ ಕಟ್ಟಡ ಉದ್ಘಾಟಿಸಲಾಗುವುದು.

ರೇಷ್ಮೆ ಇಲಾಖೆಯ ನೂತನ ಕಟ್ಟಡ ಕಾಮಗಾರಿ ಮುಗಿದಿದೆ, ಸರ್ಕಾರದಿಂದ ಬಾಕಿ ಇರುವ ಅನುದಾನ ಬಂದ ತಕ್ಷಣ ಇಲಾಖೆಗೆ ಕಟ್ಟಡ ಒಪ್ಪಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net