ಜಿಲ್ಲಾ ಸಮಾದೇಷ್ಟ ಎಲ್.ನಿರಂಜನ ಮಾತನಾಡಿ, ಪ್ರತಿ ವರ್ಷ ಅಖಿಲ ಭಾರತ ಗೃಹ ರಕ್ಷಕ ದಳ ದಿನ ಆಚರಿಸಲಾಗುತ್ತಿದ್ದು, ಜಿಲ್ಲಾ ಗೃಹರಕ್ಷಕ ದಳದವರು ಜಿಲ್ಲೆಗೆ ಮಾದರಿ. ಗುರುತರ ಆಪಾದನೆಗಳಿಲ್ಲದೆ ಉತ್ತಮವಾಗಿ ಸೇವೆ ಸಲ್ಲಿಸಿಕೊಂಡು ಬರಲಾಗಿದೆ. ತಾಪಂ, ಜಿಪಂ, ಗ್ರಾಪಂಗಳ ಚುನಾವಣೆ ಸಮೀಪಿಸುತ್ತಿದ್ದು, ಪ್ರತಿಯೊಬ್ಬರೂ ಸನ್ನದ್ಧರಾಗಬೇಕು. ಮಧ್ಯಪ್ರದೇಶ, ಆಂಧ್ರ, ತಮಿಳು ನಾಡು, ಮಹರಾಷ್ಟ್ರದಲ್ಲಿ ನಡೆಯುವ ಚುನಾವಣೆಗಳಿಗೆ ಜಿಲ್ಲೆಯಿಂದ ಗೃಹರಕ್ಷಕರು ಹೋಗುತ್ತಾರೆ. ಸಿಬ್ಬಂದಿ ಸಂಖ್ಯೆ 700ರಿಂದ 550ಕ್ಕೆ ಇಳಿದಿದ್ದು, ವಾರದೊಳಗೆ 100 ಮಂದಿ ಗೃಹರಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದರು.