ವೀರ ಯೋಧರ ತ್ಯಾಗ, ಶೌರ್ಯ ಶ್ಲಾಘನೀಯ

ವಿಜಯಪುರದ ವೇದ ಅಕಾಡೆಮಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಯಿತು. ಸುಭಾಷ ಬಗಲಿ, ಎನ್.ಜಿ. ಯರನಾಳ, ರಶ್ಮಿ ಕವಟಗಿಮಠ ಮತ್ತಿತರರಿದ್ದಾರೆ.
ವಿಜಯಪುರದ ವೇದ ಅಕಾಡೆಮಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಯಿತು. ಸುಭಾಷ ಬಗಲಿ, ಎನ್.ಜಿ. ಯರನಾಳ, ರಶ್ಮಿ ಕವಟಗಿಮಠ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಶಿವಾನಂದ ಕೆಲೂರ ಅಭಿಮತ
  • ಕಾರ್ಗಿಲ್ ವಿಜಯ ದಿವಸ ಆಯೋಜನೆ
ವಿಜಯಪುರ : ಕಾರ್ಗಿಲ್ ಯುದ್ಧದಲ್ಲಿ 1999ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯು ಸಾಧಿಸಿದ ಐತಿಹಾಸಿಕ ವಿಜಯವು ನಮ್ಮ ದೇಶದ ವೀರ ಯೋಧರ ಅಪಾರ ತ್ಯಾಗ, ಶೌರ್ಯ ಮತ್ತು ದೇಶ ಸೇವೆಯ ಸಂಕೇತವಾಗಿದೆ ಎಂದು ವೇದ ಅಕಾಡೆಮಿಯ ಅಧ್ಯಕ್ಷ ಡಾ. ಶಿವಾನಂದ ಕೆಲೂರ ಹೇಳಿದರು.
ನಗರದ ಹೊರ ಭಾಗದ ಇಟ್ಟಂಗಿಹಾಳ ರಸ್ತೆಯಲ್ಲಿನ ವೇದ ಅಕಾಡೆಮಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಧೀರ ಯೋಧರು ತಾಯ್ನಡಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತೃಣಸಮಾನವಾಗಿ ಭಾವಿಸಿ ಹೋರಾಡಿದರು. ಅಂತಹ ಅಮರ ಜವಾನರ ಬಲಿದಾನವನ್ನು ಪ್ರತಿಯೊಬ್ಬರೂ ಸದಾ ಸ್ಮರಿಸಬೇಕು. ಯೋಧರ ಈ ಅತ್ಯುನ್ನತ ತ್ಯಾಗದ ಮನೋಭಾವ ಹಾಗೂ ಶಿಸ್ತು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಲು ಸದಾ ಸ್ಫೂರ್ತಿದಾಯಕವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಯೋಧ ಸುಭಾಷ ಬಗಲಿ ಮಾತನಾಡಿ, ಕಾರ್ಗಿಲ್ ಯುದ್ಧ ಭೂಮಿಯ ಕಠಿಣ ಸನ್ನಿವೇಶಗಳು ಹಾಗೂ ಭಾರತೀಯ ವೀರ ಯೋಧರ ಸಾಹಸಗಾಥೆಗಳನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿದರು.
ಸಂಸ್ಥೆಯ ಕಾರ್ಯದರ್ಶಿ ಎನ್.ಜಿ. ಯರನಾಳ ಮಾತನಾಡಿ, ದೇಶ ಕಾಯುವ ಯೋಧರಂತೆ ವಿದ್ಯಾರ್ಥಿಗಳು ಸಹ ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮುಖ್ಯ ಗುರುಮಾತೆ ರಶ್ಮಿ ಕವಟಗಿಮಠ ಮತ್ತಿತರರಿದ್ದರು.
ಕೊನೆಯಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳ ಗಾಯನ ಹಾಗೂ ನೃತ್ಯರೂಪಕ ಪ್ರದರ್ಶನ ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net