ಯೋಧರ ತ್ಯಾಗ, ಧೈರ್ಯವೇ ದೇಶದ ಸ್ವಾತಂತ್ರ್ಯ; ಸಿಎಂ ಡಿ.ಕೆ.ಶಿ ಅಭಿಮತ

ಕಾರ್ಗಿಲ್ ವಿಜಯ ದಿವಸದಂದು ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪುಷ್ಪನಮನ ಸಲ್ಲಿಸಿದರು.
ಕಾರ್ಗಿಲ್ ವಿಜಯ ದಿವಸದಂದು ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪುಷ್ಪನಮನ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಯೋಧರ ತ್ಯಾಗ, ಧೈರ್ಯವೇ ದೇಶದ ಸ್ವಾತಂತ್ರ್ಯ
  • ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಮತ
  • ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ನಮನ

ಬೆಂಗಳೂರು: ನಮ್ಮಯೋಧರ ತ್ಯಾಗ,ಬಲಿದಾನ,ಧೈರ್ಯ ದೇಶದನಿಜವಾದ ಸ್ವಾತಂತ್ರ್ಯ.ಇಡೀ ದೇಶ ಯೋಧರಬಗ್ಗೆ ಹೆಮ್ಮೆಪಡಲಿದೆ ಎಂದುಸಿಎಂ ಡಿ.ಕೆ.ಶಿವಕುಮಾರ್ಹೇಳಿದರು.

ನೆಹರೂತಾರಾಲಯದ ರಾಷ್ಟ್ರೀಯ ಸೈನಿಕಸ್ಮಾರಕದಲ್ಲಿ ಭಾನುವಾರ ಹಮ್ಮಿಕೊಂಡಿದ್ದಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿಮಾತನಾಡಿದರು.

27ವರ್ಷಗಳ ಹಿಂದೆನಮ್ಮ ವೀರ ಯೋಧರು ಹಿಮಾಲಯದತಪ್ಪಲಿನಲ್ಲಿ ಶತ್ರುಗಳನ್ನುಸದೆ ಬಡಿದು ದೇಶದ ತ್ರಿವರ್ಣ ಧ್ವಜಹಾರಿಸಿದರು.ನಮ್ಮ ಹೀರೊಗಳುಹುತಾತ್ಮರಾಗಿರಬಹುದು ಆದರೆ ಅವರಪರಂಪರೆ ಶಾಶ್ವತ,ದೇಶಕ್ಕಾಗಿಹುತಾತ್ಮರಾದ ನಮ್ಮ ವೀರ ಯೋಧರಿಗೆದೇಶದ ಜನತೆ ಹೃತ್ಪೂರ್ವಕ ನಮನಸಲ್ಲಿಸಬೇಕಾಗಿರುವುದು ಕರ್ತವ್ಯ.ತಾಯ್ನಡನ್ನುರಕ್ಷಿಸಲು 527ಯೋಧರುಹುತಾತ್ಮರಾಗಿದ್ದಾರೆ.ಅದರಲ್ಲಿ ಕರ್ನಾಟಕದ13 ಯೋಧರುಸೇರಿದ್ದಾರೆ.ಯೋಧರು ಎಲ್ಲಾಪರಿಸ್ಥಿತಿಯಲ್ಲೂ ದೇಶದ ರಕ್ಷಣೆಗೆಬದ್ಧರಾಗಿದ್ದಾರೆ.ಭಾರತ-ಪಾಕಿಸ್ತಾನಯುದ್ಧವಾಗಿರಲಿ,ಭಾರತ-ಚೀನಾ ಯುದ್ಧವಾಗಲಿ,ಗಡಿ ಅತಿಕ್ರಮಣಪರಿಸ್ಥಿತಿಯೇ ಆಗಿರಲಿ,ಯೋಧರು ಕೆಚ್ಚೆದೆಯಿಂದದೇಶದ ಗಡಿ ರಕ್ಷಣೆಗೆ ಪ್ರತಿ ಕ್ಷಣ,ದಿನವೂಸಿದ್ಧರಾಗಿರುತ್ತಾರೆ ಎಂದು ಬಣ್ಣಿಸಿದ ಸಿಎಂ,ರಾಜ್ಯದಲ್ಲಿಲಕ್ಷಾಂತರ ಯೋಧರ ಕುಟುಂಬಗಳುನೆಲೆಸಿವೆ. ಅವರಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆಎಂದು ಭರವಸೆ ನೀಡಿದರು.ಗೃಹಮತ್ತಿಪ್ರಿಯಾಂಕ ಖರ್ಗೆ,ರಾಷ್ಟ್ರೀಯಮಿಲಿಟರಿ ಸ್ಮಾರಕ ಟ್ರಸ್ಟಿನಕೆ.ವಿ.ಶರತ್​ಚಂದ್ರ,ಎಂ.ಎಸ್.ಲೋಲಾಕ್ಷಮತ್ತಿತರರಿದ್ದರು.

ಕರ್ನಾಟಕರಕ್ಷಣಾ ವಲಯದ ಬೆನ್ನೆಲುಬು

ಯೋಧರಿಂದಾಗಿನಾವು ನಮ್ಮ ಮನೆಗಳಲ್ಲಿ ನೆಮ್ಮದಿಯಾಗಿಮಲಗುತ್ತಿದ್ದೇವೆ.ಭಾರತದ ರಕ್ಷಣಾಪಡೆಗೆ ಕರ್ನಾಟಕ ಬೆನ್ನೆಲುಬಾಗಿದೆ.ಬೆಮೆಲ್,ಡಿಆರ್‌ಡಿಒ,ಇಸ್ರೋ ಸೇರಿದಂತೆಅನೇಕ ಸಂಸ್ಥೆಗಳು ಕರ್ನಾಟಕದಲ್ಲಿಕಾರ್ಯನಿರ್ವಹಿಸುತ್ತಿವೆ.ನಾವು ಭಾರತದಮೊದಲ ಸೇನಾ ಮುಖ್ಯಸ್ಥರಾದ ಫೀಲ್ಡ್ಮಾರ್ಷಲ್ ಕಾರಿಯಪ್ಪ ಅವರ ಕೊಡುಗೆಮರೆಯಲು ಸಾಧ್ಯವಿಲ್ಲ.ಯೋಧರು,ಯುವಕರು,ಮಹಿಳೆಯರು,ರೈತರು ಹಾಗೂತೆರಿಗೆದಾರರು ನಮ್ಮ ಕೈಯಲ್ಲಿರುವಐದು ಬೆರಳುಗಳಂತೆ.ಈ ಬೆರಳುಗಳುಸೇರಿದರೆ ದೇಶ ಬಲಿಷ್ಠ ಮುಷ್ಠಿಯಾಗುತ್ತದೆ.ಕಾರ್ಗಿಲ್ ವಿಜಯ್ದಿವಸ ಬಹಳ ವಿಶೇಷವಾದ ದಿನ ಎಂದುಸಿಎಂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net