ಕುದೂರು ಪಟ್ಟಣದಲ್ಲಿ ದೇವಾಂಗ ಸಂಘದ ವತಿಯಿಂದ ಜನಿವಾರ ಹಬ್ಬವನ್ನು ಆಚರಿಸಲಾಯಿತು.ಸಂಘದ ಉಪಾಧ್ಯಕ್ಷ ಕೆ.ಜಿ ಪ್ರಕಾಶ್, ಕಾರ್ಯದರ್ಶಿ ಬಸವರಾಜು, ಖಜಾಂಚಿ ಕೆ.ಜಿ ರಾಜು, ನಿರ್ದೇಶಕ ಕೆ.ಆರ್ ರಂಗಸ್ವಾಮಿ, ಕೆ.ಎಸ್ ರೇವಣ್ಣ, ಕೆ.ವಿ ಪುಟ್ಟರಾಜು, ಕೆ.ಎಂ ರಂಗನಾಥ್, ಕೆ.ಆರ್ ಶಾಂತರಾಮು, ಕೆ.ಎನ್ ಸುರೇಶ್, ಸಂಜಯ್, ಮೋಹನ್ ಕುಮಾರ್ ಇತರರು ಇದ್ದರು.
Published on:
Copied
Follow Us
ಪ್ರಾಚೀನ ಕಾಲದಲ್ಲಿ ಗುರುಗಳಿಂದ ವೇದಾಧ್ಯಯನ ಸ್ವೀಕರಿಸುತ್ತಿದ್ದ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ತಮ್ಮ ಅಧ್ಯಯನ ಪುನರಾರಂಭಿಸುತ್ತಿದ್ದರೆಂಬ ಪರಂಪರೆಯಿದೆ. ಕಲ್ಯಾಣ ಮಂಟಪದಲ್ಲಿ ದೇವಾಂಗ ಸಂಘದ ಅಧ್ಯಕ್ಷ ಕೆಆರ್ ಜಯರಾಮ್ ಹೇಳಿದರು.
ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ದೇವಾಂಗ ಸಂಘದಿಂದ ಉಪಕರ್ಮ(ಜನಿವಾರದ ಹಬ್ಬ) ದಲ್ಲಿ ಭಾಗವಹಿಸಿ ಮಾತನಾಡಿ, ಜನಿವಾರದ ಹಬ್ಬವು ಕೇವಲ ಜನಿವಾರ ಬದಲಿಸುವ ಆಚರಣೆಯಾಗಿರದೆ, ಜ್ಞಾನ, ಸಂಸ್ಕಾರ, ಕರ್ತವ್ಯ ಹಾಗೂ ಆತ್ಮಶುದ್ಧಿ ಮಹತ್ವ ಸಾರುವ ಧಾರ್ಮಿಕ ಪರಂಪರೆಯಾಗಿದೆ ಎಂದರು.