ಕೂಡಲಸಂಗಮದಲ್ಲಿ ಜಗದ್ಗುರು ಪೂಜ್ಯ ಡಾ.ಮಾತೆ ಗಂಗಾದೇವಿ ಅವರಿಗೆ ಬಸವಕಲ್ಯಾಣ ತಾಲೂಕು ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರವೀಂದ್ರ ಕೊಳಕೂರ್, ಸಂಗಮೇಶ ಜವಾದಿ ಪ್ರವಚನ ಆಮಂತ್ರಣ ಪತ್ರವನ್ನು ಹಸ್ತಾಂತರಿಸಿದರು. ಪೂಜ್ಯ ಲಾವಣ್ಯದೇವಿ ಮಾತಾಜಿ, ಜಯಶ್ರೀ ಪಾಟೀಲ, ದತ್ತು ಗೌಡಗಾಂವೆ, ಮನೋಹರ ಮೇಧಾ, ಸುರೇಶ ಸ್ವಾಮಿ, ರಾಜೇಂದ್ರಕುಮಾರ್ ಗಂದಗೆ ಹಾಗೂ ಪ್ರಮುಖರಿದ್ದರು)
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪೂಜ್ಯ ಗಂಗಾ ಮಾತಾಜಿ ಬಣ್ಣನೆ
ಬಸವಕಲ್ಯಾಣದ ಶ್ರಾವಣ ಮಾಸ ಪ್ರವಚನದ ಆಮಂತ್ರಣ ಪತ್ರ
ಬಸವಕಲ್ಯಾಣ: ಸಮಾನತೆ, ಭಾವೈಕ್ಯತೆ ಮತ್ತು ಕಾಯಕದ ನೆಲ ಬಸವಕಲ್ಯಾಣ ಪವಿತ್ರ ಕ್ಷೇತ್ರ ಮಾನವೀಯತೆಯ ಮೌಲ್ಯಾಧಾರಿತ ಭೂಮಿಯಾಗಿದೆ ಎಂದು ಬಸವ ಧರ್ಮ ಪೀಠದ ಜಗದ್ಗುರು ಡಾ.ಮಾತೆ ಗಂಗಾದೇವಿ ಬಣ್ಣಿಸಿದರು.
ಗುರು ಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲಸಂಗಮದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಸವ ದಳಗಳ ಮಹಾ ಅಧಿವೇಶನದಲ್ಲಿ ಬಸವಕಲ್ಯಾಣದ ಶ್ರೀ ಬಸವೇಸ್ವರ ದೇವಸ್ಥಾನದಲ್ಲಿ ನಡೆಯಲಿರುವ ಶ್ರಾವಣ ಮಾಸದ ಪ್ರವಚನ ಆಮಂತ್ರಣ ಪತ್ರವನ್ನು ಸ್ವೀಕರಿಸಿ ಅವರು ಮಾತನಾಡಿದ ಅವರು, ಶ್ರೀ ಬಸವೇಸ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿ ಆಡಳಿತ ಮಂಡಳಿಯಿಂದ ಮುಂಬರುವ ಶ್ರಾವಣ ಮಾಸದಲ್ಲಿ ಆಯೋಜಿಸಿರುವ ಐತಿಹಾಸಿಕ ಪ್ರವಚನ ಕಾರ್ಯಕ್ರಮ ಬಹಳ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ದೇವಸ್ಥಾನ ಸಮಿತಿಯ ರವೀಂದ್ರ ಕೊಳಕೂರ್ ಆಮಂತ್ರಣ ಪತ್ರ ಹಸ್ತಾಂತರಿಸಿ, ಪವಿತ್ರ ನೆಲದಲ್ಲಿ ಶ್ರಾವಣ ಮಾಸದ ಪ್ರವಚನ ನಡೆಯುವುದು ವಿಶೇಷ ಮಹತ್ವ ಪಡೆದುಕೊಂಡಿದೆ. ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಮತ್ತು ಸಮಿತಿ ಪದಾಧಿಕಾರಿಗಳು ಈ ಕಾರ್ಯಕ್ರಮವನ್ನು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಅಚ್ಚುಕಟ್ಟಾಗಿ ಆಯೋಜಿಸಲಿದ್ದಾರೆ ಎಂದು ತಿಳಿಸಿದರು.
ಸಾಹಿತಿ ಸಂಗಮೇಶ ಎನ್.ಜವಾದಿ ಮಾತನಾಡಿ, ಬಸವಣ್ಣನವರ ತತ್ವಗಳನ್ನು ಜನರ ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಪ್ರವಚನಗಳು ಪ್ರಮುಖ ಪಾತ್ರ ವಹಿಸುತ್ತವೆ. ಶ್ರಾವಣ ಮಾಸದ ಪವಿತ್ರ ದಿನಗಳಲ್ಲಿ ನಡೆಯುವ ಈ ಪ್ರವಚನಗಳಿಂದ ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ಕಾಯಕದ ಮಹತ್ವ ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದರು.
ಬಸವ ಮಹಾಮಠದ ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಪೂಜ್ಯ ಲಾವಣ್ಯದೇವಿ ಮಾತಾಜಿ, ಜಯಶ್ರೀ ಪಾಟೀಲ, ದತ್ತು ಗೌಡಗಾಂವೆ, ಮನೋಹರ ಮೇಧಾ, ಸುರೇಶ ಸ್ವಾಮಿ, ರಾಜೇಂದ್ರಕುಮಾರ ಗಂದಗೆ ಮತ್ತು ಭಕ್ತರು ಇದ್ದರು.