ವಿಕಸಿತ ಭಾರತ ಸಾಕಾರದಲ್ಲಿ ಯುವಕರ ಪಾತ್ರ ಪ್ರಮುಖ

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ನವರಂಗ-2026 ಕಾರ್ಯಕ್ರಮವನ್ನು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು. ಶರಣಬಸಪ್ಪ ಪಪ್ಪಾ, ರಾಜಶೇಖರ ಸರಸಂಬಿ, ಪ್ರೊ.ಪಾಂಡುರಂಗ ಪತ್ತಿ, ಪ್ರೊ.ಎ.ಎನ್​.ವಿಜಯಕುಮಾರ್​, ಡಾ.ಶಿವಕುಮಾರ ಬೆಳ್ಳಿ ಇದ್ದರು.
ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ನವರಂಗ-2026 ಕಾರ್ಯಕ್ರಮವನ್ನು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು. ಶರಣಬಸಪ್ಪ ಪಪ್ಪಾ, ರಾಜಶೇಖರ ಸರಸಂಬಿ, ಪ್ರೊ.ಪಾಂಡುರಂಗ ಪತ್ತಿ, ಪ್ರೊ.ಎ.ಎನ್​.ವಿಜಯಕುಮಾರ್​, ಡಾ.ಶಿವಕುಮಾರ ಬೆಳ್ಳಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅನಿಸಿಕೆ
  • ಸಿಯುಕೆಯಲ್ಲಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವ್ಯವಹಾರ ನಿರ್ವಹಣಾ ವಿಭಾಗ ಎಂಬಿಎ 17ನೇ ಬ್ಯಾಚ್​ನ ನವರಂಗ-2026 ಸ್ವಾಗತ ಮತ್ತು ಉದ್ಘಾಟನಾ ಕಾರ್ಯಕ್ರಮ ಗುರುವಾರ ಜರುಗಿತು.
ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ಅವರ ಆಶಯದಂತೆ ವಿಕಸಿತ ಭಾರತ-2047 ಸಾಕಾರಗೊಳಿಸುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಜೀವನಪರ್ಯಂತ ಕಲಿಕೆಯ ಮನೋಭಾವ ಬೆಳೆಸಿಕೊಳ್ಳುವುದರ ಜತೆಗೆ ಬದಲಾವಣೆಗೆ ಹೊಂದಿಕೊಳ್ಳಬೇಕು. ನಿರಂತರ ಕೌಶಲ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಓರಿಯಂಟ್​ ಸಿಮೆಂಟ್​ ಲಿಮಿಟೆಡ್​ (ಅದಾನಿ ಸಿಮೆಂಟ್​)ನ ಜನರಲ್​ ಮ್ಯಾನೇಜರ್​ ರಾಜಶೇಖರ ಸರಸಂಬಿ ಮಾತನಾಡಿ, ಪಠ್ಯಾಧಾರಿತ ಶಿಕ್ಷಣದೊಂದಿಗೆ ಸಂಶೋಧನೆ, ನಾವೀನ್ಯತೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿಕೆ ಮತ್ತು ಮೌಲ್ಯ ಸೃಷ್ಟಿಸುವ ಕೌಶಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಮಾತನಾಡಿ, ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಾಹಿತಿ ಮತ್ತು ತಂತ್ರಜ್ಞಾನವನ್ನು ವಿವೇಕಯುತ, ಜವಾಬ್ದಾರಿಯುತವಾಗಿ ಬಳಸಬೇಕು. ಜೀವನದಲ್ಲಿ ಎದುರಾಗುವ ವೈಫಲ್ಯಗಳನ್ನು ಯಶಸ್ಸಿನ ಪಾಠವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ವ್ಯವಹಾರ ಅಧ್ಯಯನ ನಿಕಾಯದ ಡೀನ್​ ಪ್ರೊ.ಪಾಂಡುರಂಗ ಪತ್ತಿ, ವಿಭಾಗದ ಮುಖ್ಯಸ್ಥ ಪ್ರೊ.ಎ.ಎನ್​.ವಿಜಯಕುಮಾರ, ಕಾರ್ಯಕ್ರಮ ಸಂಯೋಜಕ ಡಾ.ಶಿವಕುಮಾರ ಬೆಳ್ಳಿ, ಪ್ರಾಧ್ಯಾಪಕರಾದ ಪ್ರೊ.ಮೊಹಮ್ಮದ್​ ಜೊಹೇರ್​, ಡಾ.ಸಫಿಯಾ ಪರ್ವಿನ್​, ಡಾ. ನಿರಂಜನ ಪೂಜಾರ್​, ಡಾ.ಜೈಪಾಲ ರಾಠೋಡ್​, ಡಾ.ಬಿ.ವಾಣಿ, ಡಾ.ಶ್ರೀಲಕ್ಷ್ಮೀ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net