ರಾಷ್ಟ್ರ ನಿರ್ಮಾಣದಲ್ಲಿ ಕಾನೂನು ಪಾತ್ರ ಪ್ರಮುಖ

ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಪುಸ್ತಕ ಬಿಡುಗಡೆ ಮಾಡಿದರು. ಡಾ.ಅನಂತ ಚಿಂಚೂರೆ, ಪ್ರೊ.ಜಿ.ಆರ್​.ಅಂಗಡಿ, ಪ್ರೊ.ವಿಕ್ರಮ ವಿಸಾಜಿ, ಪ್ರೊ.ಪಾಂಡುರಂಗ, ಪ್ರೊ.ಬಸವರಾಜ ಕುಬಕಡ್ಡಿ, ಪ್ರೊ.ಭರತಕುಮಾರ, ಪ್ರೊ.ಆರ್​.ಎಸ್​.ಹೆಗಡಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅನಿಸಿಕೆ
  • ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಪುಸ್ತಕ ಬಿಡುಗಡೆ
ಕಲಬುರಗಿ: ರಾಷ್ಟ್ರ ನಿರ್ಮಾಣದಲ್ಲಿ ಕಾನೂನು ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ)ದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಸಿಯುಕೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾನೂನು ವಿಭಾಗದ ಮುಖ್ಯಸ್ಥ ಡಾ.ಅನಂತ ಡಿ.ಚಿಂಚೂರೆ ಮತ್ತು ಸಂಶೋಧನಾ ವಿದ್ಯಾರ್ಥಿ ವ.ನ. ರಾಮಮೂರ್ತಿ ರಚಿಸಿದ ದಿ ಪವರ್​ ಆಫ್​ ಲಾ: 75 ಆಕ್ಟ್​$್ಸ ದಟ್​ ಟ್ರಾನ್ಸ್​ಫಾಮ್ಡ್​ರ್ ಇಂಡಿಯಾ ಎಂಬ ಪುಸ್ತಕ ಲೋಕಾರ್ಪಣೆಗೊಳಿಸಿದ ಅವರು, 2047ರ ವಿಕಸಿತ ಭಾರತದತ್ತ ಪಯಣ ಬಲಿಷ್ಠವಾಗಲು ಸಂವಿಧಾನ, ಕಾನೂನು ಆಧಾರವಾಗಲಿದೆ. ಈ ಪುಸ್ತಕ ಆಧುನಿಕ ಭಾರತ ರೂಪುಗೊಳಿಸುವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ 75 ಐತಿಹಾಸಿಕ ಕಾನೂನುಗಳ ಸಮಗ್ರ ವಿಶ್ಲೇಷಷಣೆ ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೇಖಕ ಡಾ.ಅನಂತ ಚಿಂಚೂರೆ ಪುಸ್ತಕದ ಸಮಗ್ರ ಪರಿಚಯ ಮಾಡಿ, ಕಾನೂನು ಎಂಬುದು ಕೇವಲ ನಿಯಂತ್ರಣ ವ್ಯವಸ್ಥೆಯಲ್ಲ, ಇಡೀ ದೇಶ ಮತ್ತು ಸಮಾಜದ ಪರಿವರ್ತನೆಯ ಚೇತನಶೀಲ ಸಾಧನ ಎಂದು ಅಭಿಪ್ರಾಯಪಟ್ಟರು.
ಪ್ರಾಧ್ಯಾಪಕರಾದ ಪ್ರೊ.ಜಿ.ಆರ್​. ಅಂಗಡಿ, ಪ್ರೊ.ವಿಕ್ರಮ ವಿಸಾಜಿ, ಪ್ರೊ.ಪಾಂಡುರಂಗ, ಪ್ರೊ.ಬಸವರಾಜ ಕುಬಕಡ್ಡಿ, ಪ್ರೊ.ಭರತ ಕುಮಾರ, ಪ್ರೊ.ಆರ್​.ಎಸ್​. ಹೆಗಡಿ, ಪ್ರೊ.ಪರಮೇಶ, ಪ್ರೊ.ಪ್ರಶಾಂತ, ಪ್ರೊ.ರಾವಯ್ಯ, ಪ್ರೊ.ರವಿ ಕಂಗೈ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net