ರಾಷ್ಟ್ರದ ಪ್ರಗತಿಯಲ್ಲಿ ಕಾರ್ಮಿಕ ಪಾತ್ರ ಪ್ರಮುಖ; ಎ.ಎಸ್.ಕಿರಣಕುಮಾರ್ ಅಭಿಮತ

ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಕಾರ್ಮಿಕ ನಾಯಕರಾದ ಎಸ್.ಆರ್.ದೀಪಕ್, ವಿ.ಎಚ್.ಕೆಂಪಣ್ಣ, ಶಿವರಾಜ್ ಕಪೂರ್, ಅಣ್ಣೂರು ಲಕ್ಷ್ಮಣ್, ಮಾಲಾ ಮತ್ತಿತ್ತರ ಕಾರ್ಮಿಕ ಮುಖಂಡರನ್ನು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, ಸನ್ಮಾನಿಸಿದರು. ಡಾ.ಆಂಜನಪ್ಪ, ಹುಲಿಕಲ್ ನಟರಾಜ್ ಮತ್ತಿತ್ತರರು ಉಪಸ್ಥಿತರಿದ್ದರು.

Published on

ಬೆಂಗಳೂರು:ಕಾರ್ಮಿಕರು,ರೈತರು,ಶ್ರಮ ಮತ್ತುಶ್ರದ್ದೆಯಿಂದ ಅವಿರತ ಸೇವೆಯಲ್ಲಿತೊಡಗಿಕೊಂಡಿರುವುದರಿಂದ ರಾಷ್ಟ್ರದಪ್ರಗತಿಯಾಗಲು ಸಾಧ್ಯವಾಗಿದೆಎಂದು ಎಂದು ಇಸ್ರೋ ಮಾಜಿ ಅಧ್ಯಕ್ಷಎ.ಎಸ್.ಕಿರಣ್‌ಕುಮಾರ್ಅವರು ಹೇಳಿದರು.

ಕರ್ನಾಟಕರಾಜ್ಯ ವೈಜ್ಞಾನಿಕ ಸಂಶೋಧನಾಪರಿಷತ್ತಿನ ವತಿಯಿಂದ ಆಯೋಜಿಸಿದ್ದಕಾರ್ಮಿಕ ದಿನಾಚರಣೆಯಲ್ಲಿಮಾತನಾಡಿದ ಅವರು, ಅನೇಕ ಮಹನೀಯರುಕಾರ್ಮಿಕರ ಪರವಾಗಿ ದುಡಿಯುತ್ತಿರುವುದುಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ25 ವರ್ಷಗಳಿಂದಕಾರ್ಮಿಕರಿಗೋಸ್ಕರ ನಿಸ್ವಾರ್ಥದಿಂದಸೇವೆ ಸಲ್ಲಿಸುತ್ತಿರುವ ಟೋಯೋಟೋಕಾರ್ಮಿಕರ ಸಂಘದ ಅಧ್ಯಕ್ಷಎಸ್.ಆರ್.ದೀಪಕ್ಮತ್ತು ಕಾರ್ಮಿಕ ಮುಖಂಡರಾದವಿ.ಎಚ್.ಕೆಂಪಣ್ಣ,ಡಾ.ಮಾಲಾ,ಶಿವರಾಜ್ಕಪೂರ್,ಅಣ್ಣೂರುಲಕ್ಷ್ಮಣ್ ಸೇರಿದಂತೆ ಹಲವರಿಗೆರಾಜ್ಯ ಮಟ್ಟದ ಕಾಯಕಯೋಗಿ 2026ಪ್ರಶಸ್ತಿ ನೀಡಿಗೌರವಿಸಲಾಯಿತು.

ರಾಜ್ಯವೈಜ್ಞಾನಿಕ ಸಂಶೋಧನ ಪರಿಷತ್ತುಟ್ರಸ್ಟ್ ಅಧ್ಯಕ್ಷ ಹುಲಿಕಲ್ನಟರಾಜ್ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಒಕ್ಕಲಿಗರಸಂಘದ ನಿರ್ದೇಶಕ ಡಾ.ಆಂಜನಪ್ಪಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net