ಸಮಾಜದಲ್ಲಿ ನಾಟಕದ ಪಾತ್ರ ಪ್ರಮುಖ

ಮುಗಳಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನವನ್ನು ವಿರೂಪಾ ಮಾಮನಿ ಉದ್ಘಾಟಿಸಿದರು. ಗೋಪಾಲಗೌಡ ಗಂಗರೆಡ್ಡಿ, ಮಹಾದೇವ ಯಡ್ರಾವಿ, ಈರಣ್ಣ ಚಂದರಗಿ ಇತರರಿದ್ದರು.
ಮುಗಳಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನವನ್ನು ವಿರೂಪಾ ಮಾಮನಿ ಉದ್ಘಾಟಿಸಿದರು. ಗೋಪಾಲಗೌಡ ಗಂಗರೆಡ್ಡಿ, ಮಹಾದೇವ ಯಡ್ರಾವಿ, ಈರಣ್ಣ ಚಂದರಗಿ ಇತರರಿದ್ದರು.
Published on
ಮುಗಳಿಹಾಳ: ನಾಟಕಗಳು ಸಮಾಜದ ಪ್ರತಿಬಿಂಬ. ಪುರಾತನ ಕಾಲದಲ್ಲಿ ಸಮಾಜದಲ್ಲಿ ಮನೆ ಮಾಡಿದ್ದ ಮೌಢ್ಯವನ್ನು ನಾಟಕಗಳ ಮೂಲಕ ಹೋಗಲಾಡಿಸಲು ಸಾಧ್ಯವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ವಿರೂಪಾಕ್ಷ ಮಾಮನಿ ಹೇಳಿದರು.
ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ "ಹಣೆ ನನ್ನದಾದರೂ ಹಣೆಬರಹ ನನ್ನದಲ್ಲ' ನಾಟಕ ಉದ್ಘಾಟಿಸಿ ಮಾತನಾಡಿದರು.
ಮುಖಂಡ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಸಮಾಜದಲ್ಲಿನ ಅಂಕು&ಡೊಂಕು ತಿದ್ದುವ ಜತೆಗೆ ನವ ಸಮಾಜ ನಿರ್ಮಾಣದಲ್ಲಿ ರಂಗಭೂಮಿ ಪಾತ್ರ ಮಹತ್ತರವಾಗಿವೆ ಎಂದರು. ಸೋಮಾನಂದ ಭಾರತಿ ಸ್ವಾಮೀಜಿ, ಗೋಪಾಲಗೌಡ ಗಂಗರೆಡ್ಡಿ, ಮಹಾದೇವ ಯಡ್ರಾವಿ, ಈರಣ್ಣ ಚಂದರಗಿ, ಬಸಯ್ಯ ಹಿರೇಮಠ, ಕೃಷ್ಣಮೂರ್ತಿ ತೋರಗಲ್ಲ, ಪರ್ವತಗೌಡ ಪಾಟೀಲ, ಚೇತನ ಜಕಾತಿ, ಅಶೋಕ ಪಟ್ಟಣಶೆಟ್ಟಿ, ನಾಗಪ್ಪ ಪುಂಜಿ, ರಾಮನಗೌಡ ಗಂಗರಡ್ಡಿ, ಬಸವರಾಜ ಮಾಯಣ್ಣವರ, ಲಕ್ಷ$್ಮ್ಮಣ ಪಾಟೀಲ ಇತರರಿದ್ದರು. ವಿಠ್ಠಲ ಪಾಟೀಲ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net