ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ಕಲಾವಿದರ ಪಾತ್ರ ಮಹತ್ವದ್ದು

ಕೆರೂರ ಸಮೀಪದ ಯಂಡಿಗೇರಿ ಗ್ರಾಮದಲ್ಲಿ ನಡೆದ ಪುಸ್ತಕ ದತ್ತಿ ಪ್ರದಾನ ಸಮಾರಂಭವನ್ನು ಸಾಹಿತಿಗಳು ಹಾಗೂ ಗಣ್ಯರು ಉದ್ಘಾಟಿಸಿದರು. ಸಾಹಿತಿ ಮನು ಬಳಿಗಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ನಿವತ್ತ ಕೆಎಎಸ್ ಅಧಿಕಾರಿ ಎಚ್.ಪಿ. ಶೆಲ್ಲಿಕೇರಿ ಮತ್ತಿತರರಿದ್ದರು.
ಕೆರೂರ ಸಮೀಪದ ಯಂಡಿಗೇರಿ ಗ್ರಾಮದಲ್ಲಿ ನಡೆದ ಪುಸ್ತಕ ದತ್ತಿ ಪ್ರದಾನ ಸಮಾರಂಭವನ್ನು ಸಾಹಿತಿಗಳು ಹಾಗೂ ಗಣ್ಯರು ಉದ್ಘಾಟಿಸಿದರು. ಸಾಹಿತಿ ಮನು ಬಳಿಗಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ನಿವತ್ತ ಕೆಎಎಸ್ ಅಧಿಕಾರಿ ಎಚ್.ಪಿ. ಶೆಲ್ಲಿಕೇರಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಮನು ಬಳಿಗಾರ ಹೇಳಿಕೆ
  • ಪುಸ್ತಕ ದತ್ತಿ ಪ್ರದಾನ ಸಮಾರಂಭ
ಕೆರೂರ: ಕರ್ನಾಟಕವು ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ತವರೂರಾಗಿದ್ದು, ಈ ಶ್ರೀಮಂತ ಪರಂಪರೆಯನ್ನು ಜಗತ್ತಿನ ಮೂಲೆಮೂಲೆಗೂ ಕೊಂಡೊಯ್ಯುವ ಶಕ್ತಿ ಕಲಾವಿದರಲ್ಲಿದೆ ಎಂದು ಸಾಹಿತಿ ಮನು ಬಳಿಗಾರ ಹೇಳಿದರು.
ಸಮೀಪದ ಯಂಡಿಗೇರಿ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಘಟಕ ಆಯೋಜಿಸಿದ್ದ ಪುಸ್ತಕ ದತ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಿವತ್ತ ಕೆಎಎಸ್ ಅಧಿಕಾರಿ ಎಚ್.ಪಿ. ಶೆಲ್ಲಿಕೇರಿ ಮಾತನಾಡಿ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದ ಅಭಿವದ್ಧಿಗೆ ನಿರಂತರ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಅನುದಾನದ ಕೊರತೆಯ ನಡುವೆಯೂ ಕನ್ನಡ ಸಾಹಿತ್ಯ ಪರಿಷತ್ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಉಳಿವು ಬೆಳವಣಿಗೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಕನ್ನಡಾಭಿಮಾನಿಗಳ ಸಹಕಾರದಿಂದ ಈ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ಹೇಳಿದರು.
ದತ್ತಿ ಪುರಸ್ಕೃತರಾದ ಸಾಹಿತಿಗಳಾದ ಶಾರದಾ ಮುಳ್ಳೂರ, ಎಂ.ಡಿ. ಚಿತ್ತರಗಿ, ಸಾಹಿತಿ ಮನು ಬಳಿಗಾರ ಹಾಗೂ ನಿವತ್ತ ಸಿಪಿಐ ಡಿ.ಬಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಡಿ.ಕೆ. ಚವಾಣ್, ಎಸ್.ಎಂ. ಕೋಟಿ, ರಜನಿಕಾಂತ ದೇಸಾಯಿ, ತಾಲೂಕು ಕಸಾಪ ಅಧ್ಯಕ್ಷ ಬಿ.ಎ್. ಹೊರಕೇರಿ, ಕಾರ್ಯದರ್ಶಿ ಮಾಂತೇಶ ಇಳಗೇರ, ಸಂಗಣ್ಣ ಬೀಳಗಿ, ಮಲ್ಲಿಕಾರ್ಜುನ ಶೆಲ್ಲಿಕೇರಿ ಸೇರಿ ಹಲವು ಸಾಹಿತಿಗಳು, ಕಲಾವಿದರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net