ಜೀವನದಲ್ಲಿ ಮಾತೆ ಪಾತ್ರ ಮಹತ್ವದ್ದು

ಬಸವಕಲ್ಯಾಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹುತಾತ್ಮ ಧರ್ಮಪ್ರಕಾಶಜಿ ಅವರ 88ನೇ ಬಲಿದಾನ ಸ್ಮತಿ ಕಾರ್ಯಕ್ರಮದಲ್ಲಿ ಪಂಡಿತ ನಯನಕುಮಾರ ಆಚಾರ್ಯ ಮಾತನಾಡಿದರು. ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಮಾಣಿಕರಾವ ಲಾಡ್​, ಪಂಡಿತ ರಾಜವೀರ ಶಾಸ್ತ್ರಿ, ಬಸವರಾಜ ಆರ್ಯ, ಲಕ್ಷ್ಮಣರಾವ ಗುರೂಜಿ ಇದ್ದರು.
ಬಸವಕಲ್ಯಾಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹುತಾತ್ಮ ಧರ್ಮಪ್ರಕಾಶಜಿ ಅವರ 88ನೇ ಬಲಿದಾನ ಸ್ಮತಿ ಕಾರ್ಯಕ್ರಮದಲ್ಲಿ ಪಂಡಿತ ನಯನಕುಮಾರ ಆಚಾರ್ಯ ಮಾತನಾಡಿದರು. ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಮಾಣಿಕರಾವ ಲಾಡ್​, ಪಂಡಿತ ರಾಜವೀರ ಶಾಸ್ತ್ರಿ, ಬಸವರಾಜ ಆರ್ಯ, ಲಕ್ಷ್ಮಣರಾವ ಗುರೂಜಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಭಿನವ ಘನಲಿಂಗ ರುದ್ರಮುನಿ ಶ್ರೀ ಅಭಿಮತ
  • ಕಲ್ಯಾಣದಲ್ಲಿ ಹುತಾತ್ಮ ಧರ್ಮಪ್ರಕಾಶಜಿ ಬಲಿದಾನ ಸ್ಮತಿ ದಿನ
ಬಸವಕಲ್ಯಾಣ: ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಜತೆ ಆದರ್ಶ ಬದುಕಿನ ಪಾಠ ಕಲಿಸಿಕೊಡುವಲ್ಲಿ ಮಾತೆಯ ಪಾತ್ರ ಮಹತ್ವದ್ದು. ದೇಶಭಕ್ತರು, ಮಹಾತ್ಮರು, ಮಹಾಪುರುಷರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸುವ ಮೂಲಕ ಆದರ್ಶ ಮೌಲ್ಯ ಮತ್ತು ದೇಶಭಕ್ತಿ ಬೆಳೆಸಬೇಕು ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ನುಡಿದರು.
ನಗರದ ಆರ್ಯ ಸಮಾಜ ಮಂದಿರದಲ್ಲಿ ಆರ್ಯ ಸಮಾಜ ಮಂಗಳವಾರ ಆಯೋಜಿಸಿದ್ದ ಹುತಾತ್ಮ ಧರ್ಮಪ್ರಕಾಶಜಿ ಅವರ 88ನೇ ಬಲಿದಾನ ಸ್ಮತಿ ಹಾಗೂ ದೇಶ ಸ್ವಾತಂತ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಂಘಟನೆಯಲ್ಲಿ ಶಕ್ತಿ ಇದೆ. ನಾವೆಲ್ಲರೂ ಒಂದು ಎಂಬ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಮಹಾರಾಷ್ಟ್ರದ ಪರಳಿ ವೈಜಿನಾಥನ ಸಂಸತ ಪ್ರಾಧ್ಯಾಪಕ ಪಂಡಿತ ನಯನಕುಮಾರ ಆಚಾರ್ಯ ವಿಶೇಷ ಉಪನ್ಯಾಸ ನೀಡಿ, ವೇದಜ್ಞಾನ ಸಂಪನ್ನರಾಗಿದ್ದ ಹುತಾತ್ಮ ಧರ್ಮಪ್ರಕಾಶಜಿ ಅಪ್ರತಿಮ ದೇಶಭಕ್ತರಾಗಿದ್ದರು. 19 ವರ್ಷದ ತಾರುಣ್ಯದಲ್ಲೇ ದೇಶಕ್ಕಾಗಿ ಸರ್ವಸ್ವ ತ್ಯಾಗ ಮಾಡಿದರು. ಅವರ ಆದರ್ಶ ಬದುಕು ಯುವ ಸಮೂಹಕ್ಕೆ ಸ್ಫೂರ್ತಿಯಾಗಲಿ ಎಂದು ಸದಾಶಯ ವ್ಯಕ್ತಪಡಿಸಿದರು.
ಸೊಲ್ಲಾಪುರದ ಪಂಡಿತ ರಾಜವೀರ ಶಾಸ್ತ್ರಿ ವಿಶೇಷ ಉಪನ್ಯಾಸ ನೀಡಿ, ದೇಶಕ್ಕಾಗಿ ಸರ್ವಸ್ವ ತ್ಯಾಗ ಮಾಡಿದವರನ್ನು ಸ್ಮರಿಸಬೇಕು. ಅನೇಕ ದೇಶಭಕ್ತರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್ಯ ಸಮಾಜದ ಪಾತ್ರ ಮಹತ್ವದ್ದು ಎಂಬುದನ್ನು ಇತಿಹಾಸಕಾರರೂ ಒಪ್ಪುತ್ತಾರೆ. ಇದರಲ್ಲಿ ಮಹರ್ಷಿ ದಯಾನಂದ ಸರಸ್ವತಿ ಕೊಡುಗೆ ದೊಡ್ಡದು ಎಂದು ಬಣ್ಣಿಸಿದರು.
ಹಿರಿಯರಾದ ಮಾಣಿಕರಾವ ಲಾಡ್​ ಅಧ್ಯಕ್ಷತೆ ವಹಿಸಿದ್ದರು. ಲಕ್ಷ$್ಮಣರಾವ ಗುರೂಜಿ, ಹುಮನಾಬಾದ್​ನ ಬಸವರಾಜ ಆರ್ಯ, ಭಾಲ್ಕಿಯ ತುಕಾರಾಮ ಮೋರೆ ಮಾತನಾಡಿದರು. ಧರ್ಮಪ್ರಕಾಶಜಿ ಮೊಮ್ಮಗ ವೇದಪ್ರಕಾಶ ಆರ್ಯಭಾನು, ರಾಯಚೂರಿನ ಮೀನಾಕ್ಷಿ ಆರ್ಯ, ಮಾರುತಿರಾವ ಮಹೇಂದ್ರಕರ್​, ಸತೀಶರಾವ ಲಾಡ್​, ಅಶ್ವಿನ ಸುತ್ರಾವೆ, ಭಾನುಪ್ರಸಾದ ಪಾಂಡೆ, ಶಿವಾಜಿ ಕಾಳೆ, ಪ್ರಕಾಶ ರುದ್ರಮುನಿ ಇತರರಿದ್ದರು.
ಆರ್ಯ ಸಮಾಜದ ಪ್ರಧಾನ ಶಿವಾಜಿರಾವ ಜಗತಾಪ ಪ್ರಾಸ್ತಾವಿಕ ಮಾತನಾಡಿದರು. ಪುರೋಹಿತ ಸುರೇಂದ್ರಗಿರ ಗೋಸ್ವಾಮಿ ಸ್ವಾಗತಿಸಿದರು. ಮಂತ್ರಿ ಸಂಜುಕುಮಾರ ಜಾಧವ್​ ನಿರೂಪಣೆ ಮಾಡಿದರು. ಉದಗೀರಿಯ ಪ್ರತಾಪಸಿಂಹಜಿ ಚವ್ಹಾಣ್​ ಭಜನೆ ನಡೆಸಿಕೊಟ್ಟರು. ಇದಕ್ಕೂ ಮುನ್ನ ಬೆಳಗ್ಗೆ ಧರ್ಮಪ್ರಕಾಶ ಪ್ರಾಥಮಿಕ ಶಾಲೆಯಲ್ಲಿ ಅಗ್ನಿಹೋತ್ರ(ಯಜ್ಞ) ಜರುಗಿತು. ಹುತಾತ್ಮ ಧರ್ಮಪ್ರಕಾಶ ಸ್ಮಾರಕ ಸ್ತಂಭದ ಬಳಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಧರ್ಮಪ್ರಕಾಶ ಗಲ್ಲಿಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಆರ್ಯ ಸಮಾಜ ಮಂದಿರವರೆಗೆ ಭಜನೆ, ಜೈಘೋಷಗಳೊಂದಿಗೆ ನಗರ ಕೀರ್ತನೆ ಜರುಗಿತು.
ರಾಷ್ಟ್ರ ಧರ್ಮವೇ ಮುಖ್ಯ
ಮಹರ್ಷಿ ದಯಾನಂದ ಸರಸ್ವತಿ ಧರ್ಮ ಸುಧಾರಕ ಜತೆ ರಾಜನೀತಿಜ್ಞರಾಗಿದ್ದರು. ರಾಷ್ಟ್ರ ಧರ್ಮಕ್ಕೆ ಮೊದಲಾದ್ಯತೆ ನೀಡಿದ್ದರು. ದೇಶದ ಸ್ವಾತಂತ್ರ್ಯಕ್ಕೆ ಒಂದು ಯಾಗದ ಅಗತ್ಯವಿದೆ ಎಂದು ಮನಗಂಡು ಆರ್ಯ ಸಮಾಜ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು ಎಂದು ಸೊಲ್ಲಾಪುರದ ಆರ್ಯ ಸಮಾಜವಾದಿ ಪಂಡಿತ ರಾಜವೀರಜಿ ಶಾಸ್ತ್ರಿ ಸ್ಮರಿಸಿದರು. ರಾಷ್ಟ್ರ ಸುರಕ್ಷಿತವಿದ್ದಾಗಲೇ ಧರ್ಮ ಸುರಕ್ಷಿತವಾಗಿರುತ್ತದೆ. ಹೀಗಾಗಿ ರಾಷ್ಟ್ರವೇ ಮೊದಲು, ರಾಷ್ಟ್ರ ಧರ್ಮವೇ ಮೊದಲು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇಂದು ಯುವ ಸಮೂಹ ಜಾಗೃತವಾಗಬೇಕಿದೆ. ಎಲ್ಲರ ಉನ್ನತಿಯಲ್ಲೇ ತನ್ನ ಉನ್ನತಿ ಕಂಡುಕೊಳ್ಳಬೇಕು. ಇದುವೇ ಧರ್ಮ, ಇದುವೇ ದೇಶ ಭಕ್ತಿ. ಸ್ವಧರ್ಮ, ಸ್ವದೇಶಿ ವಸ್ತು, ಸ್ವಭಾಷೆ ಬಗ್ಗೆ ಎಲ್ಲರಲ್ಲೂ ಅಭಿಮಾನ ಇರಬೇಕು ಎಂದು ಸಲಹೆ ನೀಡಿದರು.
"

ಸ್ವಾತಂತ್ರಕ್ಕಾಗಿ ಹೋರಾಡಿ ಹುತಾತ್ಮರಾದ ಧರ್ಮಪ್ರಕಾಶಜಿ ಅವರ ಆದರ್ಶ ಜೀವನದ ಬಗ್ಗೆ ಯುವ ಸಮೂಹಕ್ಕೆ ತಿಳಿಸಿ ರಾಷ್ಟ್ರಭಕ್ತಿ ಜಾಗೃತಗೊಳಿಸುವ ಕಾರ್ಯ ನಡೆಯಬೇಕು. ಯುವಕರು ದೇಶಭಕ್ತರ ತ್ಯಾಗ, ಬಲಿದಾನವನ್ನು ಅರಿತು ಜೀವನದಲ್ಲಿ ಪ್ರೇರಣೆ ಪಡೆದು ಧರ್ಮದ ದಾರಿಯಲ್ಲಿ ನಡೆಯಲು ಪ್ರಯತ್ನಿಸಬೇಕು.

— > ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ
"

ಜೀವನದಲ್ಲಿ ಮಾಡುವ ಸಣ್ಣಸಣ್ಣ ಒಳ್ಳೆಯ ಕಾರ್ಯಗಳು ರಾಷ್ಟ್ರ ನಿಮಾರ್ಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ರಾಷ್ಟ್ರ ನಿಮಾರ್ಣದಲ್ಲಿ ತೊಡಗುವಂತೆ ಪ್ರೇರಣೆ ನೀಡುವಲ್ಲಿ ಮಾತೆಯರ ಪಾತ್ರ ದೊಡ್ಡದು. ಮಕ್ಕಳಲ್ಲಿ ಆರ್ಯ ವ್ಯಕ್ತಿತ್ವ ನಿಮಾರ್ಣಕ್ಕಾಗಿ ಆರ್ಯ ಸಮಾಜದಿಂದ ಪ್ರತಿವರ್ಷ ಆರ್ಯ ಮಾನವತಾ ಸಂಸ್ಕಾರ ಶಿಬಿರ ಆಯೋಜಿಸಬೇಕು.

— > ಪಂಡಿತ ನಯನಕುಮಾರ ಆಚಾರ್ಯ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net