ಸುರಪುರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕಂದಾಯ ದಿನ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಉದ್ಘಾಟಿಸಿದರು. ರಾಜಾ ಕೃಷ್ಣಪ್ಪ ನಾಯಕ, ಶ್ರೀಧರ ಗೋಟೂರ, ಎಚ್.ಎ.ಸರಕಾವಸ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಅಭಿಪ್ರಾಯ
ಸುರಪುರದಲ್ಲಿ ಕಾರ್ಯಕ್ರಮ
ಸುರಪುರ: ವರ್ಷವಿಡೀ ದಿನದ 24 ಗಂಟೆ ಸಾರ್ವಜನಿಕರ ಸೇವೆಗೆ ಸದಾ ಸಿದ್ಧವಾಗಿರುವ ಏಕೈಕ ಇಲಾಖೆ ಕಂದಾಯ. ಜನನದಿಂದ ಮರಣದವರೆಗೆ ಪ್ರತಿಯೊಬ್ಬರ ಜೀವನದೊಂದಿಗೆ ನೇರವಾಗಿ ಬೆಸೆದಿರುವ ಇದು ಸರ್ಕಾರದ ಮಾತೃ ಇಲಾಖೆ ಎಂದು ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಹೇಳಿದರು.
ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕಂದಾಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಬಹುತೇಕ ಇಲಾಖೆಗಳು ಕಂದಾಯದಿಂದಲೇ ಕವಲೊಡೆದು ರೂಪುಗೊಂಡಿವೆ. ಜನನದಿಂದ ಮರಣ ಪ್ರಮಾಣದವರೆಗೆ ಪ್ರತಿ ಹಂತದಲ್ಲೂ ಕಂದಾಯ ಇಲಾಖೆ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಸಹಾಯಕ ಆಯುಕ್ತ ಶ್ರೀಧರ ಶಂಕರ್ ಗೋಟೂರ ಮಾತನಾಡಿ, ಕಂದಾಯ ಅತ್ಯಂತ ಜವಾಬ್ದಾರಿಯುತ ಇಲಾಖೆ. ಇದರಲ್ಲಿ 80ಕ್ಕೂ ಹೆಚ್ಚು ಕಾನೂನುಗಳಡಿ ಕೆಲಸ ಮಾಡಬೇಕಾಗುತ್ತದೆ. ದಿನನಿತ್ಯ ಹೊಸ ವಿಷಯ ಕಲಿಕೆ, ನಿಯಮಗಳ ಬಗ್ಗೆ ಮಾಹಿತಿ ಪಡೆದು ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕು ಎಂದು ಹೇಳಿದರು.
ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಮಾತನಾಡಿ, ತಾಲೂಕು ಆಡಳಿತ ಅತ್ಯುತ್ತಮ ಕೆಲಸ ಮಾಡುತ್ತಿದೆ. ಸಾರ್ವಜನಿಕರು ಯಾವುದೇ ದೂರು&ದುಮ್ಮಾನಗಳಿಲ್ಲದೆ ಇಲಾಖೆ ಕಾರ್ಯವೈಖರಿಯನ್ನು ಒಪ್ಪಿಕೊಂಡಿದ್ದಾರೆ. ಉತ್ತಮ ಆಡಳಿತ ನೀಡುತ್ತಿರುವ ತಹಸೀಲ್ದಾರ್ ಹಾಗೂ ಸಿಬ್ಬಂದಿಗೆ ತಾವು ಸದಾ ಬೆಂಬಲವಾಗಿ ಇರುವುದಾಗಿ ಅಭಯ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎಚ್.ಎ. ಸರಕಾವಸ್ ಮಾತನಾಡಿ, ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಕಂದಾಯ ಇಲಾಖೆ ಕೊಡುಗೆ ಅಪಾರವಾಗಿದೆ. ಜನಸೇವೆ ನಮ್ಮ ಧ್ಯೇಯ, ಮಾರ್ಗದರ್ಶಕ ಆಡಳಿತ ನಮ್ಮ ಗುರಿ ಎಂಬ ಸಂದೇಶದೊಂದಿಗೆ ಇಲಾಖೆ ಮುನ್ನೆಡೆಯುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ರಾಮಕೃಷ್ಣ ಕಲಬುರಗಿ, ಕಂದಾಯ ಇಲಾಖೆ ನೌಕರರ ಸಂದ ಜಿಲ್ಲಾಧ್ಯಕ್ಷ ಸಂಗಮೇಶ ದೇಸಾಯಿ, ತಾಲೂಕು ಅಧ್ಯಕ್ಷ ರವಿ ಓ.ಎಚ್. ಇತರರಿದ್ದರು. ಚನ್ನಬಸಪ್ಪ ಚಲುವಾದಿ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಬಿರಾದಾರ್ ಸ್ವಾಗತಿಸಿದರು. ರವಿ ನಾಯಕ ನಿರೂಪಣೆ ಮಾಡಿ ವಂದಿಸಿದರು.