ಕ್ವಿಟ್ ಇಂಡಿಯಾ ಸ್ವತಂತ್ರ ಸಂಗ್ರಾಮದ ನಿರ್ಣಾಯಕ ಹೋರಾಟ

ಯಾದಗಿರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕ್ವಿಟ್ ಇಂಡಿಯಾ ಚಳವಳಿಯ ೮೪ ವರ್ಷಾಚರಣೆಯಲ್ಲಿ ಜಿ¯್ಲÁ ವಕ್ತಾರ ಶ್ಯಾಮಸನ್ ಮಾಳಿಕೇರಿ ಮಾತನಾಡಿದರು. ಶಾಸಕ ಚನ್ನಾರಡ್ಡಿ ಪಾಟೀಲï, ಜಿ¯್ಲÁಧ್ಯಕ್ಷ ಬಸರಡ್ಡಿ ಅನಪುರ ಇತರರಿದ್ದರು.
ಯಾದಗಿರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕ್ವಿಟ್ ಇಂಡಿಯಾ ಚಳವಳಿಯ ೮೪ ವರ್ಷಾಚರಣೆಯಲ್ಲಿ ಜಿ¯್ಲÁ ವಕ್ತಾರ ಶ್ಯಾಮಸನ್ ಮಾಳಿಕೇರಿ ಮಾತನಾಡಿದರು. ಶಾಸಕ ಚನ್ನಾರಡ್ಡಿ ಪಾಟೀಲï, ಜಿ¯್ಲÁಧ್ಯಕ್ಷ ಬಸರಡ್ಡಿ ಅನಪುರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿ¯್ಲÁ ವಕ್ತಾರ ಶ್ಯಾಮಸನ್ ಮಾಳಿಕೇರಿ ಹೇಳಿಕೆ
  • ಕಾಂಗ್ರೆಸ್ ಕಚೇರಿಯಲ್ಲಿ ಚಳವಳಿ ೮೪ನೇ ವರ್ಷಾಚರಣೆ
ಯಾದಗಿರಿ :

ರಾಷ್ಟçಪಿತ ಮಹಾತ್ಮ ಗಾಂಽ ನೇತೃತ್ವದಲ್ಲಿ ೧೯೪೨ರ ಆ.೮ರಂದು ಮುಂಬೈನ ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ನಡೆದಿದ್ದ ಕ್ವಿಟ್ ಇಂಡಿಯಾ ಚಳವಳಿ ಭಾರತ ಸ್ವಾತಂತ್ರ‍್ಯ ಸಂಗ್ರಾಮದ ನಿರ್ಣಾಯಕ ಮತ್ತು ಅಂತಿಮ ದೊಡ್ಡ ಹೋರಾಟವಾಗಿತ್ತು ಎಂದು ಜಿ¯್ಲÁ ಕಾಂಗ್ರೆಸ್ ವಕ್ತಾರ ಶ್ಯಾಮಸನ್ ಮಾಳಿಕೇರಿ ಹೇಳಿದರು.

ಜಿ¯್ಲÁ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕ್ವಿಟ್ ಇಂಡಿಯಾ ಚಳವಳಿಯ ೮೪ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಡು ಇಲ್ಲವೇ ಮಡಿ ಎಂಬ ಕರೆಯೊಂದಿಗೆ ಬ್ರಿಟಿಷರು ತಕ್ಷಣವೇ ಭಾರತ ಬಿಟ್ಟು ತೊಲಗಬೇಕೆಂಬ ಗಾಂಽÃಜಿ ಆಗ್ರಹ ಆಂಗ್ಲ ಸರ್ಕಾರವನ್ನೇ ನಡುಗಿಸಿತ್ತು ಎಂದರು.
ಜಿ¯್ಲÁಧ್ಯಕ್ಷ ಬಸರಡ್ಡಿ ಅನಪುರ ಮಾತನಾಡಿ, ಬ್ರಿಟಿಷರ ದೌರ್ಜನ್ಯ ಅತಿಯಾಗಿತ್ತು, ಭಾರತೀಯರನ್ನು ಕಾಲಕಸವಾಗಿ ಕಾಣುವ ಪ್ರವೃತ್ತಿ ಗಾಂಽÃಜಿ ಅವರನ್ನು ಕೆರಳಿಸಿದಾಗಲೇ ಕ್ವಿಟ್ ಇಂಡಿಯಾ ಚಳವಳಿ ಶುರುವಾಯಿತು. ಸಂಪೂರ್ಣ ಸ್ವಾತಂತ್ರ÷್ಯ ಪಡೆಯುವ ಹಂಬಲ ಹೆಚ್ಚಾಗಿ ದೇಶಾದ್ಯಂತ ಕೋಟ್ಯಂತರ ಜನರನ್ನು ಒಗ್ಗೂಡಿಸಿತು ಎಂದು ಹೇಳಿದರು.
ಚಳವಳಿ ಆರಂಭವಾದ ತಕ್ಷಣ ಗಾಂಽÃಜಿ ಸೇರಿ ಪ್ರಮುಖ ಕಾಂಗ್ರೆಸ್ ನಾಯಕರನ್ನು ಬ್ರಿಟಿಷರು ಬಂಽಸಿದರು. ಇದರಿಂದ ಇಡೀ ದೇಶದಲ್ಲಿ ಹೊಸ ಕ್ರಾಂತಿ ಶುರುವಾಯಿತು. ಈ ಹೋರಾಟದಲ್ಲಿ ಹಿರಿಯರ ಜತೆ ಯುವಕರು ಮತ್ತು ಸಾಮಾನ್ಯ ಜನರು ಬೀದಿಗಿಳಿದರು ಎಂದರು.
ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ, ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಈಟೆ, ವಡಗೇರಾ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಾಷುಮಿಯಾ ಮಿರ್ಚಿ, ಹೊನ್ನೇಶ ದೊಡ್ಡಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net