ಯಾದಗಿರಿ ನಗರದ ವಾರ್ಡ್ 9ರ ಬೂತ್ ಸಂಖ್ಯೆ 36ರಲ್ಲಿ ಮಂಗಳವಾರ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯ ಶ್ರೀಧರ ಸಾಹುಕಾರ ಭಾಗವಹಿಸಿ ಮಾಹಿತಿ ನೀಡಿದರು. ಮೇಲ್ವಿಚಾರಕರಾದ ರವಿಚಂದ್ರ ನಾಯ್ಕಲ್, ಬಿಎಲ್ಒ ಅಶ್ವಿನಿ ಶ್ರೀನಿವಾಸ ಚಾಮನಹಳ್ಳಿ, ನಗರಸಭೆ ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್, ಬಿಎಲ್ಒ&2 ಮಂಜುನಾಥ ಗುತ್ತೇದಾರ್ ಇತರರಿದ್ದರು.
ಯಾದಗಿರಿ: ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕಾಗಿದ್ದು, ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯ ಶ್ರೀಧರ ಸಾಹುಕಾರ ಹೇಳಿದರು.
ನಗರದ ವಾರ್ಡ್ 9ರ ಬೂತ್ ಸಂಖ್ಯೆ 36ರಲ್ಲಿ ಮಂಗಳವಾರ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ವರ್ಗಾವಣೆ ಅಗತ್ಯವಿದ್ದಲ್ಲಿ ಚುನಾವಣಾ ಆಯೋಗದ ನಿಯಮಾನುಸಾರ ಬಿಎಲ್ಒ ಮೂಲಕ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ರಾಜಕೀಯ ಪಗಳ ಕಾರ್ಯಕರ್ತರು ಮತದಾರರಲ್ಲಿ ಜಾಗೃತಿ ಮೂಡಿಸುವುದು, ಅರ್ಜಿ ನಮೂನೆಗಳನ್ನು ಭರ್ತಿ ಮಾಡಲು ಸಹಾಯ ಮಾಡುವುದು ಹಾಗೂ ಯಾವುದೇ ಅರ್ಹ ಮತದಾರರ ಹೆಸರು ಕೈತಪ್ಪದಂತೆ ಸಹಕರಿಸುವ ಕೆಲಸ ಮಾಡಬಹುದು.
ಆದರೆ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಅಥವಾ ತೆಗೆದುಹಾಕುವ ಅಂತಿಮ ಅಧಿಕಾರ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಸೇರಿದೆ ಎಂದು ಅವರು ಸ್ಪಷ್ಟಪಡಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಸಂಪೂರ್ಣವಾಗಿ ಪಾತೀತ ಮತ್ತು ಸಂವಿಧಾನಬದ್ಧವಾಗಿದ್ದು, ನಾಗರಿಕರು ಅಧಿಕೃತ ದಾಖಲೆಗಳೊಂದಿಗೆ ಬಿಎಲ್ಒ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಈ ವೇಳೆ ಮೇಲ್ವಿಚಾರಕರಾದ ರವಿಚಂದ್ರ ನಾಯ್ಕಲ್, ಬಿಎಲ್ಒ ಅಶ್ವಿನಿ ಶ್ರೀನಿವಾಸ ಚಾಮನಹಳ್ಳಿ, ನಗರಸಭೆ ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್, ಬಿಎಲ್ಒ-2 ಮಂಜುನಾಥ ಗುತ್ತೇದಾರ, ವಿನೋದ ಪಡಿಶೆಟ್ಟಿ, ಮಲ್ಲು ಕೋಲಿವಾಡ, ಮಲ್ಲುಗೌಡ ಪಾಟೀಲ್, ಆನಂದ್ ಸಾಹುಕಾರ ಇತರರಿದ್ದರು.