ಜಿಬಿಎ ಆದ ನಂತರ ಸಮಸ್ಯೆ ಮತ್ತಷ್ಟು ಉಲ್ಬಣ ; ಬೀದಿಬದಿ ವ್ಯಾಪಾರಿಗಳ ಆರೋಪ, ಪ್ರತಿಭಟನೆಯ ಎಚ್ಚರಿಕೆ

ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ ಆಯೋಜಿದ್ದ ಸುದ್ದಿಗೋಷ್ಠಿಯಲ್ಲಿ ಬಾಬು,  ಮಂಜು, ವನಜಾಕ್ಷಿ, ಸಮೀರ್, ವಿನಯ್ ಶ್ರೀನಿವಾಸ್ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿತ್ತಿಪತ್ರ ಪ್ರದರ್ಶಿಸಿದರು.
ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ ಆಯೋಜಿದ್ದ ಸುದ್ದಿಗೋಷ್ಠಿಯಲ್ಲಿ ಬಾಬು, ಮಂಜು, ವನಜಾಕ್ಷಿ, ಸಮೀರ್, ವಿನಯ್ ಶ್ರೀನಿವಾಸ್ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿತ್ತಿಪತ್ರ ಪ್ರದರ್ಶಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಅಸ್ತಿತ್ವಕ್ಕೆ ಬಂದ ನಂತರ ಸಮಸ್ಯೆಗಳು ಮತ್ತಷ್ಟು ಉಲ್ಬಣ
  • ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ ಆರೋಪ
  • ಕೂಡಲೇ ಗುರುತಿನ ಚೀಟಿ ವಿತರಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಬೆಂಗಳೂರು:ಮಹಾನಗರ ಪಾಲಿಕೆಯನ್ನು5 ವಿಭಾಗಮಾಡಿದ ನಂತರ ಜಿಬಿಎ ಅಸ್ತಿತ್ವಕ್ಕೆಬಂದಿದ್ದು,ಇದರಿಂದ ಬೀದಿಬದಿವ್ಯಾಪಾರಿಗಳ ಸಮಸ್ಯೆಗಳು ಮತ್ತಷ್ಟುಉಲ್ಬಣಿಸಿವೆ ಎಂದು ಕರ್ನಾಟಕಪ್ರಗತಿಪರ ಬೀದಿ ವ್ಯಾಪಾರಿಗಳಸಂಘ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷಬಾಬು, 2014ರಬೀದಿಬದಿ ವ್ಯಾಪಾರಿಗಳ ಕಾಯ್ದೆಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ.ಕಾಯ್ದೆಯ ಪ್ರಕಾರಸಮೀಕ್ಷೆ ನಡೆಸಿ ಎಲ್ಲರಿಗೂಗುರುತಿನ ಚೀಟಿ ನೀಡಬೇಕಾದ ಸರ್ಕಾರಒಂದು ವರ್ಷವಾದರೂ ಈವರೆಗೆ ಗುರುತಿನಚೀಟಿ ಮತ್ತು ಮಾರಾಟ ಪ್ರಮಾಣಪತ್ರನೀಡಿಲ್ಲ. ಇದರಿಂದಪೊಲೀಸರು, ಪಾಲಿಕೆಅಧಿಕಾರಿಗಳು ಆಗಾಗ ಬಂದುವ್ಯಾಪಾರಿಗಳಿಗೆ ಕಿರುಕುಳನೀಡುತ್ತಿದ್ದಾರೆ.ಈಗಾಗಲೇ ಸರ್ವೇಮಾಡಿರುವ ಬೀದಿಬದಿ ವ್ಯಾಪಾರಿಗಳಗುರುತಿನ ಚೀಟಿ ಮತ್ತು ಮಾರಾಟಪ್ರಮಾಣ ಪತ್ರವನ್ನು ಕೂಡಲೇವಿತರಿಸಬೇಕೆಂದು ಒತ್ತಾಯಿಸಿದ್ದಾರೆ.

ಗಾಂಧಿಬಜಾರ್‌ನಬೀದಿಬದಿ ವ್ಯಾಪಾರಿ ವನಜಾಕ್ಷಿಮಾತನಾಡಿ,ವ್ಯಾಪಾರಿಗಳಿಗೆಉಚಿತ ಶೌಚಾಲಯವನ್ನು ವ್ಯವಸ್ಥೆಮಾಡಬೇಕು. ಮೂತ್ರವಿಸರ್ಜನೆಗೆ ಪ್ರತಿ ಬಾರಿ 5ರೂಪಾಯಿ ಕೊಡಬೇಕೆಂಬಕಾರಣಕ್ಕೆ ಹಲವು ಮಹಿಳೆಯರು ಮೂತ್ರವಿಸರ್ಜನೆಗೆ ಹೋಗದೆ ಕಿಡ್ನಿಸಮಸ್ಯೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ.ಎಲ್ಲ ಕಡೆಸಿಸಿಟಿವಿಯನ್ನು ಅಳವಡಿಸಬೇಕು.ಇದರಿಂದ ಕಳ್ಳತನಹಾಗೂ ವ್ಯಾಪಾರಿಗಳ ಮುಂಗಟ್ಟುಗಳಿಗೆಬೆಂಕಿ ಹಾಕುವುದನ್ನು ನಿಯಂತ್ರಿಸಬೇಕು.ಎಲ್ಲಕ್ಕಿಂತಮುಖ್ಯವಾಗಿ ಬೀದಿಬದಿ ವ್ಯಾಪಾರಿಗಳಿಗೆಆರೋಗ್ಯ ಸಮಸ್ಯೆಯುಂಟಾದರೆ ಅವರಿಗೆಉಚಿತವಾಗಿ ಚಿಕಿತ್ಸೆ ನೀಡಲುಸರ್ಕಾರ ಯೋಜನೆ ರೂಪಿಸಬೇಕೆಂದುಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿವಕೀಲರಾದ ವಿನಯ್ ಶ್ರೀನಿವಾಸ್,ಬೀದಿಬದಿವ್ಯಾಪಾರಿಗಳಾದ ಶಿವಾಜಿನಗರಸಮೀರ್, ಜಯನಗರದಮಂಜು ಮತ್ತಿತರರು ಹಾಜರಿದ್ದರು.

ಬೀದಿವ್ಯಾಪಾರಿಗಳ ಪ್ರಮುಖ ಬೇಡಿಕೆ

*ವ್ಯಾಪಾರದ ಸ್ಥಳನಮೂದಿಸಿದ ಗುರುತಿನ ಚೀಟಿವಿತರಿಸಬೇಕು

* ಪ್ರತಿವಲಯದಲ್ಲಿ ‘ಪಟ್ಟಣ ವ್ಯಾಪಾರಸಮಿತಿ’ ರಚಿಸಬೇಕು

*ಅಧಿಕಾರಿಗಳಿಗೆಬೀದಿ ವ್ಯಾಪಾರಿಗಳ ಕಾನೂನು ಕುರಿತುತಿಳಿಸಬೇಕು

* ಮುಂದಿನಬಜೆಟ್‌ನಲ್ಲಿ ಬೀದಿ ವ್ಯಾಪಾರಿಗಳಿಗೆಶೆಲ್ಟರ್ ನಿರ್ಮಿಸಲು ಹಣ ಮೀಸಲಿಡಬೇಕು

* ಬೀದಿವ್ಯಾಪಾರಿಗಳ ಮೇಲಿನ ಕಿರುಕುಳನಿಲ್ಲಬೇಕು

* ಈತಿಂಗಳೊಳಗೆ ಬೇಡಿಕೆ ಈಡೇರಿಸದಿದ್ದರೆಪ್ರತಿಭಟನೆಯ ಎಚ್ಚರಿಕೆ

ಮಳೆ, ಬಿಸಿಲಿನಿಂದ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಬಿಬಿಎಂಪಿಯವರೆ ಛತ್ರಿ ಅಥವಾ ಟೆಂಟ್‌ಗಳನ್ನು ವಿತರಿಸಲಿ. ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಸರ್ಕಾರ ಹಣ ಮೀಸಲಿಟ್ಟಿದ್ದು, ಅದರ ಸದ್ಭಳಕೆಗೆ ಯೋಜನೆ ರೂಪಿಸಲಿ

— ಸಮೀರ್, ಬೀದಿಬದಿ ವ್ಯಾಪಾರಿ, ಶಿವಾಜಿನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net