ಹಡಪದ ಅಪ್ಪಣ್ಣ ತತ್ವಾದರ್ಶ ಸಮಾಜಕ್ಕೆ ದಾರಿದೀಪ

ಚಿಟಗುಪ್ಪದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ವೈದ್ಯಾಧಿಕಾರಿ ಡಾ.ವಿಜಯ ಹಿರಾಸ್ಕರ್​, ಡಾ.ನಾಗೇಶ, ಡಾ.ಶಿಲ್ಪರಾಣಿ, ಡಾ.ಪ್ರೀತಿ ವಾಲಿ, ಡಾ.ನಜೀಮಾ ಪಟೇಲ್​, ಗೀತಾ ತುಳಾಜೆ, ಪ್ರಭು ಮುದ್ನಾಳಕರ್​ ಇತರರಿದ್ದರು.
ಚಿಟಗುಪ್ಪದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ವೈದ್ಯಾಧಿಕಾರಿ ಡಾ.ವಿಜಯ ಹಿರಾಸ್ಕರ್​, ಡಾ.ನಾಗೇಶ, ಡಾ.ಶಿಲ್ಪರಾಣಿ, ಡಾ.ಪ್ರೀತಿ ವಾಲಿ, ಡಾ.ನಜೀಮಾ ಪಟೇಲ್​, ಗೀತಾ ತುಳಾಜೆ, ಪ್ರಭು ಮುದ್ನಾಳಕರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ವಿಜಯ ಹಿರಾಸ್ಕರ್​ ಅಭಿಮತ
  • ಚಿಟಗುಪ್ಪದಲ್ಲಿ ಜಯಂತಿ
ಚಿಟಗುಪ್ಪ: ಶಿವಶರಣ ಹಡಪದ ಅಪ್ಪಣ್ಣರು ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಶರಣ ಚಳವಳಿಯ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಅವರು ಪ್ರತಿಪಾದಿಸಿದ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವಿಜಯ ಹಿರಾಸ್ಕರ್​ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರ 892ನೇ ಜಯಂತಿ ನಿಮಿತ್ತ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶಿವಶರಣ ಹಡಪದ ಅಪ್ಪಣ್ಣರು ಬಸವಣ್ಣನವರ ಅನುಯಾಯಿಯಾಗಿ ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರು. ಅವರ ಆದರ್ಶಗಳು ಇಂದಿನ ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿಮಾರ್ಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಆಸ್ಪತ್ರೆಯ ವೈದ್ಯರಾದ ಡಾ.ನಾಗೇಶ, ಡಾ.ಶಿಲ್ಪರಾಣಿ, ಡಾ.ಪ್ರೀತಿ ವಾಲಿ, ಡಾ.ನಜೀಮಾ ಪಟೇಲ್​ ಹಾಗೂ ಸಿಬ್ಬಂದಿ ಗೀತಾ ತುಳಾಜೆ, ಸ್ನೇಹಾ, ಸುಮಾ, ವಂದನಾ, ಫೌಜಿಯ, ಲಿಂಗರಾಜ, ಪ್ರಭು ಮುದ್ನಾಳಕರ್​, ದೇವೇಂದ್ರ ನಾಗೇನಕೇರಾ, ಪ್ರಶಾಂತ, ಶಿವರಾಜ ಮುಸ್ತಾಪುರ, ಸುನೀಲ ಮಾನೆ, ದಿವಾಕರ, ಜಿಬೇಶ್​, ಅಫರೆಡಿ, ಸುರೇಶಕುಮಾರ, ಸಿದ್ದಲಿಂಗ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net