ಪ್ರತಿಭಾ ಪುರಸ್ಕಾರ ಸಾಧನೆಗೆ ರಹದಾರಿ

ಜಮಖಂಡಿ ನಗರದ ದಾನಮ್ಮದೇವಿ ದೇವಸ್ಥಾನದಲ್ಲಿ ರವೀಂದ್ರ ಸಂಪಗಾಂವಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಲ್ಲಿಕಾರ್ಜುನ ಜಿರಲಿ, ಶಂಕರ ಜಿರಲಿ, ಮಲ್ಲಪ್ಪ  ಜೈನಾಪೂರ, ನಿಂಗಪ್ಪ ಲಿಗಾಡಿ, ಸಚೀನ ಪಟ್ಟಣಶೆಟ್ಟಿ ಇತರರಿದ್ದರು.
ಜಮಖಂಡಿ ನಗರದ ದಾನಮ್ಮದೇವಿ ದೇವಸ್ಥಾನದಲ್ಲಿ ರವೀಂದ್ರ ಸಂಪಗಾಂವಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಲ್ಲಿಕಾರ್ಜುನ ಜಿರಲಿ, ಶಂಕರ ಜಿರಲಿ, ಮಲ್ಲಪ್ಪ ಜೈನಾಪೂರ, ನಿಂಗಪ್ಪ ಲಿಗಾಡಿ, ಸಚೀನ ಪಟ್ಟಣಶೆಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರವೀಂದ್ರ ಸಂಪಗಾಂವಿ ಮಾಹಿತಿ
  • 14ರಂದು ಸನ್ಮಾನ ಸಮಾರಂಭ
ಜಮಖಂಡಿ: ಬಣಜಿಗ ನಗರ ಘಟಕ ಹಾಗೂ ಬಣಜಿಗ ಮಂಡಳಿ ಜಮಖಂಡಿ ಅವರ ಸಂಯುಕ್ತ ಆಶ್ರಯದಲ್ಲಿ ಜೂ.14ರಂದು ಬೆಳಗ್ಗೆ 10ಕ್ಕೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ದಾನಮ್ಮ ದೇವಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರವೀಂದ್ರ ಸಂಪಗಾಂವಿ ಹೇಳಿದರು.
ನಗರದ ದಾನಮ್ಮದೇವಿ ದೇವಸ್ಥಾನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಖಂಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಣಜಿಗ ಸಮಾಜದ ಮಕ್ಕಳಿಗಾಗಿ ಕಳೆದ ಹಲವು ವರ್ಷಗಳಿಂದ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದೇವೆ.
ಈ ವರ್ಷ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ಶೈಕ್ಷಣಿಕ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರತಿಭಾ ಪುರಸ್ಕಾರ ಮಕ್ಕಳಿಗೆ ಸಹಕಾರಿಯಾಗಲಿದೆ ಎಂದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹಾಗೂ ಶಿರೋಳ ರಾಮಾರೂಢ ಮಠದ ಶಂಕರಾರೂಢ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ನಾಡೋಜ ಜಗದೀಶ ಗುಡಗುಂಟಿ ಉದ್ಘಾಟಿಸಲಿದ್ದಾರೆ. ಮಲ್ಲಿಕಾರ್ಜುನ ಜಿರಲಿ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಆನಂದ ನ್ಯಾಮಗೌಡ, ಬಾಗಲಕೋಟೆ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಸಿ.ಎಸ್.ಬಾಂಗಿ, ಶಂಕರ ಜಿರಲಿ ಪಾಲ್ಗೊಳ್ಳುವವರು.
ವಿಶ್ರಾಂತ ಉಪನ್ಯಾಸಕ ಚನ್ನಮಲ್ಲಯ್ಯ ಮಠಪತಿ ಉಪನ್ಯಾಸ ನೀಡಲಿದ್ದಾರೆ. ಮಹಿಳಾ ಬಳಗದ ಉಮಾ ಮಹೇಶ ಬಾಂಗಿ, ಪವಿತ್ರಾ ಕಲ್ಯಾಣಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಜಿರಲಿ, ಶಂಕರ ಜಿರಲಿ, ಮಲ್ಲಪ್ಪ ಜೈನಾಪೂರ, ನಿಂಗಪ್ಪ ಲಿಗಾಡಿ, ಸಚೀನ ಪಟ್ಟಣಶೆಟ್ಟಿ, ರಜತ ಮಹಾಬಳಶೆಟ್ಟಿ, ತುಷಾರ ಅಂಬಲಜೇರಿ, ಅರವಿಂದ ಗುಜ್ಜರ, ಸಂಗಮೇಶ ಹಲವಾಯಿ, ಷಣ್ಮುಖಪ್ಪ ಮಹಾಬಳಶೆಟ್ಟಿ, ಮಲ್ಲಪ್ಪ ಮುದಕನ್ನವರ, ಶಂಕರ ಚಿಮ್ಮಡ, ಪ್ರಭು ಕಲ್ಯಾಣಶೆಟ್ಟಿ, ಮುರಗೆಪ್ಪ ಕುರಿ, ಮಲ್ಲಿಕಾರ್ಜುನ ಇಂಗಳಗಾಂವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net