ಪೌಷ್ಟಿಕಾಂಶ ಸುಧಾರಣೆಗೆ ಪೋಷನ್​ ಅಭಿಯಾನ ಸಹಕಾರಿ poshan abhiyan

The Poshan campaign helps improve nutrition
The Poshan campaign helps improve nutrition
Published on
poshan abhiyan ಗುಬ್ಬಿ: ಪಿಎಂ ಪೋಷನ್​ ಯೋಜನೆಯಡಿ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶ ಒದಗಿಸಲಾಗುತ್ತಿದೆ ಎಂದು ಶಾಸಕ ಎಸ್​.ಆರ್​. ಶ್ರೀನಿವಾಸ್​ ತಿಳಿಸಿದರು.
ಪಟ್ಟಣದ ಜಿಎಚ್​ಪಿಎಸ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಿಎಂ ಪೋಷಣ್​ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪಿಎಂ ಪೋಷನ್​ ಭಾರತ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದು ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸುವ ಗುರಿ ಹೊಂದಿದೆ. ಯೋಜನೆಯು ಅಪೌಷ್ಟಿಕತೆ, ರಕ್ತಹಿನತೆ ಮತ್ತು ಮಕ್ಕಳಲ್ಲಿ ತೂಕದ ಕೊರತೆ ಕಡಿಮೆ ಮಾಡಲು ತಂತ್ರಜ್ಞಾನ, ಸಮುದಾಯದ ಒಳಗೊಳ್ಳುವಿಕೆ ಮತ್ತು ಸಮಗ್ರ ವಿಧಾನವನ್ನು ಬಳಸುತ್ತದೆ ಎಂದರು.
ಮುಖ್ಯಶಿಕ್ಷಕರು ಮಕ್ಕಳಿಗೆ ಕೊಡುವ ಆಹಾರದಲ್ಲಿ ಯಾವುದೇ ರೀತಿಯ ಕಳಪೆ ಮಾಡುವುದಾಗಲಿ, ಪ್ರಮಾಣವನ್ನು ಕಡಿಮೆ ಮಾಡುವುದಾಗಲಿ ಮಾಡದೆ ಸರ್ಕಾರದ ನಿಯಮದಂತೆ ಮಕ್ಕಳಿಗೆ ಊಟ ನೀಡುವಂತೆ ಶಿಕ್ಷಕರಿಗೆ ಸೂಚಿಸಿದರು.
ತಹಸೀಲ್ದಾರ್​ ಬಿ.ಆರತಿ ಮಾತನಾಡಿ, ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಬಿಸಿ ಊಟ ಒದಗಿಸಲಾಗುತ್ತದೆ. ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಾಗಿದ್ದು, ಲಿಂಗ ಮತ್ತು ಸಾಮಾಜಿಕ ವರ್ಗದ ಯಾವುದೇ ತಾರತಮ್ಯವಿಲ್ಲದೆ ಎಲ್ಲ ಅರ್ಹ ಮಕ್ಕಳನ್ನು ಒಳಗೊಳ್ಳುತ್ತದೆ ಎಂದು ತಿಳಿಸಿದರು.
ಬಿಆರ್​ಸಿ ಮಧುಸೂದನ್​, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್​, ಮುಖ್ಯಶಿಕ್ಷಕಿ ಮಂಜುಳಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net