ಜನಪರ ಕಾರ್ಯಕ್ರಮ ಇಂದಿಗೂ ಮಾದರಿ

ಮಳವಳ್ಳಿಯ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ತಹಸೀಲ್ದಾರ್ ಲೋಕೇಶ್ ಪುಷ್ಪಾರ್ಚನೆ ಮಾಡಿದರು. ಕೆ.ಎಸ್.ವಿನೋದ್ ಕುಮಾರ್, ಚೇತನ್‌ಕುಮಾರ್, ದೊಡ್ಡಯ್ಯ, ಕೆಂಪರಾಜು, ನಂಜಮ್ಮಣಿ, ಸೋಮಶೇಖರ್ ಇದ್ದರು
ಮಳವಳ್ಳಿಯ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ತಹಸೀಲ್ದಾರ್ ಲೋಕೇಶ್ ಪುಷ್ಪಾರ್ಚನೆ ಮಾಡಿದರು. ಕೆ.ಎಸ್.ವಿನೋದ್ ಕುಮಾರ್, ಚೇತನ್‌ಕುಮಾರ್, ದೊಡ್ಡಯ್ಯ, ಕೆಂಪರಾಜು, ನಂಜಮ್ಮಣಿ, ಸೋಮಶೇಖರ್ ಇದ್ದರು
Published on

ಮಳವಳ್ಳಿ:

ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರು ಬಡವರ್ಗದ ಲಕ್ಷಾಂತರ ಕುಟುಂಬಗಳ ಬದುಕಿಗೆ ಆಸರೆಯಾದವರು ಎಂದು ತಹಸೀಲ್ದಾರ್ ಲೋಕೇಶ್ ಸ್ಮರಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಗುರುವಾರ ಸರಳವಾಗಿ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 111ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಹರಿಕಾರರು. ದೀನ ದಲಿತರು, ಹಿಂದುಳಿದ ವರ್ಗಗಳು ಹಾಗೂ ರೈತರ ಬದುಕು ಬದಲಿಸಲು ಅವರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ, ಸರ್ಕಾರಿ ನೌಕರರಿಗೆ ಶೇ. 20 ಮೀಸಲಾತಿ, ಆಡಳಿತ ವಿಕೇಂದ್ರೀಕರಣದಂತಹ ಕಾರ್ಯಕ್ರಮಗಳು ಇಂದಿಗೂ ಮಾದರಿ ಎಂದು ಹೇಳಿದರು.
ಅರಸು ಅವರು ರೈತ ರಾಜ್ಯ ಕಟ್ಟುವ ಕನಸು ಕಂಡಿದ್ದರು. ಶಿಕ್ಷಣ, ಆರೋಗ್ಯ, ಮೀಸಲಾತಿ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಸಮಾನತೆ ತರಲು ಅವರು ಶ್ರಮಿಸಿದ್ದರು. ಇಂದಿನ ದಿನಗಳಲ್ಲಿ ಅವರ ಆದರ್ಶಗಳನ್ನು ಪ್ರತಿ ಸರ್ಕಾರಿ ನೌಕರ ಮತ್ತು ಜನಪ್ರತಿನಿಧಿಗಳು ಅಳವಡಿಸಿಕೊಳ್ಳಬೇಕಾದ ಅಗತ್ಯವಿದ್ದು, ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವುದೇ ಅವರಿಗೆ ನಾವು ನೀಡುವ ನಿಜವಾದ ಗೌರವ ಎಂದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕೆ.ಎಸ್.ವಿನೋದ್‌ಕುಮಾರ್ ಅವರು ಅರಸು ಅವರ ಜೀವನ ಸಾಧನೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಚೇತನ್‌ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಕೆಂಪರಾಜು, ಸಿಡಿಪಿಒ ನಂಜಮ್ಮಣಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂದೀಪ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸೋಮಶೇಖರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net